ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಹಿತ್ತಲಲ್ಲಿ ಬೆಳೆದಿದ್ದ ಗಾಂಜಾ ಗಿಡ ವಶಕ್ಕೆ

ಧಾರವಾಡ: ಮನೆಯ ಹಿತ್ತಲಿನಲ್ಲೇ ಬೆಳೆದಿದ್ದ ಗಾಂಜಾ ಗಿಡವನ್ನು ಧಾರವಾಡದ ಸೈಬರ್ ಆರ್ಥಿಕ, ಮಾದಕ ದ್ರವ್ಯ ಹಾಗೂ ಅಪರಾಧ ಠಾಣೆ ಪೊಲೀಸರು ವಶಕ್ಕೆ ಪಡೆದು, ಆ ವ್ಯಕ್ತಿಯನ್ನು ಬಂಧಿಸಿದ್ದಾರೆ.

ಧಾರವಾಡ ತಾಲೂಕಿನ ಕರಡಿಗುಡ್ಡ ಗ್ರಾಮದ ವ್ಯಕ್ತಿಯೊಬ್ಬ ತನ್ನ ಮನೆಯ ಹಿತ್ತಲಿನಲ್ಲೇ ಗಾಂಜಾ ಗಿಡ ಬೆಳೆದಿದ್ದ. ಈ ವಿಷಯ ಗೊತ್ತಾದ ಪೊಲೀಸರು ಸ್ಥಳಕ್ಕೆ ಭೇಟಿ ಕೊಟ್ಟು ಆ ಗಾಂಜಾ ಗಿಡ ಹಾಗೂ ಅದನ್ನು ಬೆಳೆದಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.

7 ಕೆಜಿ, 455 ಗ್ರಾಂ ಹಸಿ ಗಾಂಜಾ ಇದಾಗಿದ್ದು, ಈ ಗಿಡ ಬೆಳೆಯಲು ಯಾವುದೇ ಅನುಮತಿ ಇಲ್ಲದೇ ಹೋದರೂ ಈ ವ್ಯಕ್ತಿ ಅಕ್ರಮವಾಗಿ ತನ್ನ ಮನೆಯ ಹಿತ್ತಲಿನಲ್ಲೇ ಈ ಗಾಂಜಾ ಗಿಡ ಬೆಳೆದಿದ್ದ. ಸದ್ಯ ಆರೋಪಿತನನ್ನು ಪೊಲೀಸರು ಬಂಧಿಸಿದ್ದಾರೆ.

Edited By : Abhishek Kamoji
Kshetra Samachara

Kshetra Samachara

17/10/2024 09:04 pm

Cinque Terre

30.22 K

Cinque Terre

8

ಸಂಬಂಧಿತ ಸುದ್ದಿ