ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಪ್ರೀತಿಸಿ ಮದುವೆಯಾದ ಜೋಡಿಗೆ ಜೀವ ಬೆದರಿಕೆ - ರಕ್ಷಣೆ ಕೊಡುವಂತೆ ಪೊಲೀಸರ ಮೊರೆ

ಹುಬ್ಬಳ್ಳಿ : ಪ್ರೀತಿಸಿ ಮದುವೆಯಾದ ಜೋಡಿಗೆ ಹುಡುಗಿ ಮನೆಯವರು ಜೀವ ಬೆದರಿಕೆ ಹಾಕಿದ್ದಾರೆ. ಈ ಹಿನ್ನೆಲೆ ಜೋಡಿ ಇದೀಗ ಜೀವದ ಭಯಕ್ಕೆ ಮಾಧ್ಯಮದ ಮುಂದೆ ತಮ್ಮ ಕಷ್ಟ ಹೇಳಿಕೊಂಡಿದ್ದಾರೆ. ಆನಂದ ದೊಡ್ಡಮನಿ (21) ಮೇಘಾನಾ(19) ಪ್ರೀತಿಸಿ ಮದುವೆಯಾದ ಜೋಡಿ ಇದೀಗ ರಕ್ಷಣೆ ಕೊಡುವಂತೆ ಪೊಲೀಸರ ಮೊರೆ ಹೋಗಿದ್ದಾರೆ.

ಆನಂದ ಆಟೋ ಚಾಲಕರಾಗಿದ್ದು, ಯುವತಿ ಮೇಘಾನಾ ಕಾಲೇಜು ವಿದ್ಯಾರ್ಥಿನಿ.. ಇಬ್ಬರು ಕಳೆದ ಮೂರು ವರ್ಷದಿಂದ ಪ್ರೀತಿ ಮಾಡುತ್ತಿದ್ದಾರಂತೆ.. ಇತ್ತೀಚೆಗೆ ಇವರ ಪ್ರೀತಿ ವಿಷಯ ಮೇಘಾನಾ ಮನೆಯವರಿಗೆ ಗೊತ್ತಾಗಿದೆ. ಈ ಹಿನ್ನೆಲೆ ಮೇಘಾನಾಳನ್ನ ಕಟುಂಬಸ್ಥರು ಮನೆಯಲ್ಲಿ ಕೂಡಿಹಾಕಿ ಹೊಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿಭಯದಲ್ಲೆ ಮೂರು ದಿನಗಳಿಂದ ಹಿಂದೆ ಮನೆ ಬಿಟ್ಟು ಬಂದು ಮದುವೆಯಾಗಿದ್ದಾರೆ.

ಇದರಿಂದ ಕೋಪಗೊಂಡ ಮೇಘಾನಾ ಕುಟುಂಬಸ್ಥರು, ಆನಂದ ಮನೆಗೆ ನುಗ್ಗಿ ತಂದೆ-ತಾಯಿ ಮೇಲೆ ಹಲ್ಲೆ ನಡೆಸಿ, ತಂದೆ- ತಾಯಿಗೆ ಕೊಲೆ ಬೆದರಿಕೆ ಹಾಕಿದ್ದಾರಂತೆ.. ಅಲ್ಲದೆ ಮೇಘಾನಾ ಮತ್ತು ಆನಂದ ಸಿಕ್ಕಿರೆ ಅಲ್ಲಿಯೇ ಕೊಂದು ಬಿಡ್ತೀವಿ ಅಂತ ವಾರ್ನಿಂಗ್ ಬೇರೆ ಕೊಟ್ಟಿದ್ದಾರೆ. ಇದರಿಂದ ಭಯದಲ್ಲಿ ಆನಂದ ಮತ್ತು ಮೇಘಾನಾ ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ.

ಸದ್ಯ ಜೀವ ಭಯದಲ್ಲಿರುವ ಈ ಜೋಡಿ ರಕ್ಷಣೆ ನೀಡುವಂತೆ ಪೊಲೀಸರ ಮೊರೆ ಹೋಗಿದ್ದಾರೆ. ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ಇದ್ದು, ಈ ಪ್ರೇಮಿಗಳಿಗೆ ಪೊಲೀಸರು ಯಾವ ರೀತಿಯಾಗಿ ರಕ್ಷಣೆ ಕೊಡುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.

ವಿನಯ ರೆಡ್ಡಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

15/10/2024 09:20 pm

Cinque Terre

164.78 K

Cinque Terre

39

ಸಂಬಂಧಿತ ಸುದ್ದಿ