ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಸಿಎಸ್‌ಆರ್ ನಿಧಿಯಡಿ ಶಾಲೆಗಳಿಗೆ ಮೂಲ ಸೌಕರ್ಯ- ಮಧು ಬಂಗಾರಪ್ಪ

ಧಾರವಾಡ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಸಮಗ್ರ ಶಿಕ್ಷಣ ಕರ್ನಾಟಕ, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ, ಇಂಡಿಯಾ ಲಿಟರೆಸೆ ಪ್ರಾಜೆಕ್ಟ್‌, ಕಾಗ್ನಿಜೆಂಟ್‌ ಫೌಂಡೇಶನ್‌, ಇವೈ ಜಿಡಿಎಸ್‌ ಸಂಸ್ಥೆ ಮತ್ತು ಡೆಲ್‌ ಟೆಕ್ನಾಲಜೀಸ್‌ ವತಿಯಿಂದ ಧಾರವಾಡದ ಆಲೂರು ವೆಂಕಟರಾವ್‌ ಸಭಾಭವನದಲ್ಲಿ ಮಂಗಳವಾರ ದಿಕ್ಸೂಚಿ–2024 ವೃತ್ತಿ ಮಾರ್ಗದರ್ಶನ ಮತ್ತು ಐಸಿಟಿ ಕೌಶಲ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮಕ್ಕೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಚಾಲನೆ ನೀಡಿದರು.

ನಂತರ ಮಾತನಾಡಿದ ಸಚಿವರು, ಬೆಳಗಾವಿ ವಿಭಾಗದ 300 ಹಾಗೂ ಕಲಬುರಗಿ ವಿಭಾಗದ 300 ಶಾಲೆಗಳಲ್ಲಿ ಕಂಪ್ಯೂಟರ್‌ಗಳು ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಂಪ್ಯೂಟರ್‌ಗಳನ್ನು ಶೀಘ್ರದಲ್ಲಿ ಒದಗಿಸಲಾಗುವುದು ಎಂದರು.

ಐಸಿಟಿ ಕಾರ್ಯಕ್ರಮವನ್ನು ಈಗ 16 ಜಿಲ್ಲೆಗಳಲ್ಲಿ ಪರಿಚಯಿಸಲಾಗಿದೆ. ಇದರಿಂದ ನಾಲ್ಕು ಲಕ್ಷ ಮಕ್ಕಳಿಗೆ ಅನುಕೂಲವಾಗಿದೆ. ಸಂಸ್ಥೆಗಳು, ಕಂಪನಿಗಳ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ನಿಧಿ ಪಡೆದು ಶಾಲೆಗಳಲ್ಲಿ ಮೂಲಸೌಕರ್ಯ ಕಲ್ಪಿಸಲು ಗಮನಹರಿಸಲಾಗಿದೆ ಎಂದರು.

ಐಎಲ್‌ಪಿ ಸಂಸ್ಥೆಯ ಕಾರ್ಯದರ್ಶಿ ಪ್ರಮೋದ್‌ ಶ್ರೀಧರಮೂರ್ತಿ, ಕಾಗ್ನಿಜೆಂಟ್‌ ಫೌಂಡೇಶನ್‌ ಸಂಸ್ಥೆಯ ದೀಪಕ್‌ ಪ್ರಭು, ವೆಂಕಟೇಶ್‌ಕುಮಾರ್‌, ಶಾಲಾ ಶಿಕ್ಷಣ ಇಲಾಖೆ ಹೆಚ್ಚುವರಿ ಆಯುಕ್ತೆ ಜಯಶ್ರೀ ಶಿಂತ್ರಿ, ಸಮಗ್ರ ಶಿಕ್ಷಣ ಕರ್ನಾಟಕ ಸಹನಿರ್ದೇಶಕ ರಂಗಯ್ಯ, ಡಿಎಸ್‌ಇಆರ್‌ಟಿ ನಂಜಯ್ಯ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Edited By : Manjunath H D
Kshetra Samachara

Kshetra Samachara

15/10/2024 09:18 pm

Cinque Terre

22.61 K

Cinque Terre

0

ಸಂಬಂಧಿತ ಸುದ್ದಿ