ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ಆಟೋ, ಕಾರ್ ನಡುವೆ ಡಿಕ್ಕಿ - ಇಬ್ಬರು ಸಾವು

ಹಾವೇರಿ: ಚಾಲಕನ ನಿಯಂತ್ರಣ ತಪ್ಪಿದ ಕಾರು ರೋಡ್ ಡಿವೈಡರ್ ದಾಡಿ ಎದುರಿಗೆ ಬರುತ್ತಿದ್ದ ಆಟೋಗೆ ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹಾವೇರಿ ಸಮೀಪದ ತೋಟದಯಲ್ಲಾಪುರ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 45ರಲ್ಲಿ ನಡೆದಿದೆ.

ಮೃತ ಪ್ರಯಾಣಿಕರು ದಾವಣಗೆರೆ ಮೂಲದವರಾಗಿದ್ದು ಹೆಸರುಗಳು ಪತ್ತೆಯಾಗಿಲ್ಲ. ಆಟೋದಲ್ಲಿದ್ದ ಇಬ್ಬರು ಪ್ರಯಾಣಿಕರು ಸ್ಥಳದಲ್ಲಿಯೇ ಸಾವುನ್ನಪ್ಪಿದ್ದಾರೆ. ಕಾರು ಚಾಲಕ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಾರು ಆಟೋದ ಮೇಲೆ ಬಿದ್ದ ರಭಸಕ್ಕೆ, ಪೇರಲ ಮತ್ತು ಚಿಕ್ಕು ಹಣ್ಣುಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿ‌ಯಾಗಿ ಬಿದ್ದಿವೆ.

Edited By : Vinayak Patil
PublicNext

PublicNext

15/10/2024 07:40 pm

Cinque Terre

28.55 K

Cinque Terre

0