ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಸ್ವಸ್ಥ ಮಾನಸಿಕ ಆರೋಗ್ಯವೇ ಬದುಕು - ನ್ಯಾಯಾಧೀಶ ಅಬ್ದುಲ್ ಖಾದರ್

ಕುಂದಗೋಳ : ಹೆಣ್ಣು ಮಗುವಿನ ಶ್ರೇಷ್ಠತೆ ಮತ್ತು ಹೆಣ್ಣು ಮಕ್ಕಳಿಗೆ ಇರುವ ಅವಕಾಶಗಳನ್ನು ರೂಪಿಸುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಪ್ರಾಮುಖ್ಯತೆ ಪಡೆದಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಗೌರವಾನ್ವಿತ ಅಬ್ದುಲ್ ಖಾದರ್ ಹೇಳಿದರು.

ಅವರು ಕುಂದಗೋಳ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಹಾಗೂ ಅಂತಾರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ ಕಾರ್ಯಕ್ರಮವನ್ನು ಸಸಿಗೆ ನಿರೆರೇದು ಉದ್ಘಾಟಿಸಿ ಮಾತನಾಡಿ 'ನಾವು ಜೀವಿಸುವ ವಾತಾವರಣದಲ್ಲಿ ನಮ್ಮ ಸ್ವಸ್ಥ ಮಾನಸಿಕ ಆರೋಗ್ಯ ಉತ್ತಮವಾಗಿದ್ದಾಗ ಮಾತ್ರ ಉತ್ತಮ ಬದುಕು ರೂಪುಗೊಳ್ಳುತ್ತದೆ ಎಂದರು.

ಬಳಿಕ ವಕೀಲರ ಸಂಘದ ಉಪಾಧ್ಯಕ್ಷರಾದ ಆರ್.ಎನ್.ಕಮತದ ವಕೀಲರು ಮಾತನಾಡಿ ಮಾನಸಿಕ ಆರೋಗ್ಯ ಉದ್ದೇಶ ಅಂತರಾಷ್ಟ್ರೀಯ ಹೆಣ್ಣು ಮಗು ದಿನಾಚರಣೆ ವಿಶೇಷತೆ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ಡಾ.ಮಹೇಂದ್ರ.ಆರ್ ವಹಿಸಿದ್ದರು, ಅತಿಥಿಗಳಾಗಿ ಡಾ‌.ಸೋಫಿಯಾ ದಾಸರಿ, ವಕೀಲರ ಸಂಘದ ಕಾರ್ಯದರ್ಶಿ ವಾಯ್.ಬಿ.ಬಿಳೇಬಾಳ, ಸಹಾಯಕ ಸರ್ಕಾರಿ ಅಭಿಯೋಜಕರಾದ ಗೀತಾ.ಜಿ ಮಾನಸಿಕ ಆರೋಗ್ಯ ಅಧಿಕಾರಿ ಡಾ.ಸೋಮಯ್ಯ ಚಿಕ್ಕಮಠ, ಹಿರಿಯ ಆರೋಗ್ಯ ನಿರೀಕ್ಷಣಾ ಅಧಿಕಾರಿ ವಿರೇಶ್ ಅಂಗಡಿ ಉಪಸ್ಥಿತರಿದ್ದರು.

Edited By : Suman K
Kshetra Samachara

Kshetra Samachara

15/10/2024 06:03 pm

Cinque Terre

16.75 K

Cinque Terre

0

ಸಂಬಂಧಿತ ಸುದ್ದಿ