ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಕರಾಳ ದಿನಾಚರಣೆಗೆ ಮುಂದಾಗಿದ್ದ ಎಂಇಎಸ್‌ಗೆ ಪಾಠ ಮಾಡಿದ ಡಿಸಿ

ಬೆಳಗಾವಿ: ಕರ್ನಾಟಕ ರಾಜ್ಯೋತ್ಸವ ಪ್ರತಿಯಾಗಿ ಕರಾಳ ದಿನಾಚರಣೆಗೆ ನಡೆಸಲು ಮುಂದಾಗಿದ್ದ ಎಂಇಎಸ್ ಪುಂಡರಿಗೆ ಬೆಳಗಾವಿ ಡಿಸಿ ಮಹಮ್ಮದ್ ರೋಷನ್ ಶಾಕ್ ಕೊಟ್ಟಿದ್ದಾರೆ.

ನವೆಂಬರ್ 1ರಂದು ಎಂಇಎಸ್ ಕರಾಳ‌ ದಿನಾಚರಣೆಗೆ ಅನುಮತಿ ಇಲ್ಲ ಎಂದು ಡಿಸಿ ಮಹಮ್ಮದ್ ರೋಷನ್ ತಿಳಿಸಿದ್ದಾರೆ. ಕರ್ನಾಟಕ ರಾಜ್ಯೋತ್ಸವದ ಪ್ರತಿಯಾಗಿ ಕರಾಳ ದಿನಾಚರಣೆಗೆ ಅವಕಾಶ ಕೋರಿ ಡಿಸಿ ಬಳಿಗೆ ಎಂಇಎಸ್ ಮುಖಂಡರು ಬಂದಿದ್ದರು.

ಬೆಳಗಾವಿ ಡಿಸಿ ಕಚೇರಿಯಲ್ಲಿ ಎಂಇಎಸ್ ಮುಖಂಡರಿಗೆ ಡಿಸಿ ಮೊಹಮ್ಮದ್ ರೋಷನ್ ಬುದ್ಧಿವಾದ ಹೇಳಿದ್ದಾರೆ.. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಕಾನೂನಿನ ಚೌಕಟ್ಟಿನಲ್ಲಿ ಪ್ರತಿಭಟಿಸುವ ಹಕ್ಕಿದೆ. ನವೆಂಬರ್ 1 ರಂದು ಬಿಟ್ಟು ಪರ್ಯಾಯ ದಿನ ಕಾನೂನಿನ ಚೌಕಟ್ಟಿನಲ್ಲಿ ಪ್ರತಿಭಟನೆ ಮಾಡಲು ಅವಕಾಶ ಕೊಡುತ್ತೇನೆ. ಆದ್ರೆ, ಯಾವುದೇ ರೀತಿಯ ಕರ್ನಾಟಕದ ಐಕ್ಯತೆಗೆ ಧಕ್ಕೆ ತರುವ ಹೋರಾಟ, ಪ್ರತಿಭಟನೆಗೆ ಅವಕಾಶ ಕೊಡುವುದಿಲ್ಲ ಎಂದರು‌.

ಗಣೇಶೋತ್ಸವ ಈದ್ ಮಿಲಾದ್ ಸಾಮರಸ್ಯದಿಂದ ಆಚರಣೆ ಮಾಡಿದ್ದೇವೆ. ಹಾಗೆ ನೀವೂ ರಾಜ್ಯೋತ್ಸವ ದಿನ ಬಿಟ್ಟು ಬೇರೆ ದಿನ ಹೋರಾಟ ಮಾಡಬೇಕು ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಎಂಇಎಸ್ ಮುಖಂಡರು ಕನ್ನಡ ರಾಜ್ಯೋತ್ಸವ ಪೂರ್ವದಿಂದ ನಮ್ಮ ಹೋರಾಟವಿದೆ. ಹೀಗಾಗಿ ನವೆಂಬರ್ 1 ರಂದೇ ಕರಾಳ ದಿನಕ್ಕೆ ಅನುಮತಿ ಕೊಡಲು ಪಟ್ಟು ಹಿಡಿದರು.

ನಿಮ್ಮೆಲ್ಲರ ಭಾವನೆಗಳನ್ನ ನಾನು ಗೌರವಿಸುವೆ, ನಾನು ತೆಗೆದುಕೊಳ್ಳುವ ನಿರ್ಧಾರಕ್ಕೆ ತಾವೆಲ್ಲ ಬದ್ಧ ಇರಬೇಕು. ಬೆಳಗಾವಿಯಲ್ಲಿ ಭಾಷಾ ಸಾಮರಸ್ಯ ಕಾಪಾಡುವುದು ಮುಖ್ಯವಾಗಿದೆ‌. ಪ್ರತಿ ರಾಜ್ಯೋತ್ಸವ ದಿನ ಬೆಳಗಾವಿ ಜಿಲ್ಲೆಯಲ್ಲಿ 2 ಸಾವಿರ ಕೇಸ್ ದಾಖಲಾಗುತ್ತವೆ. ನನಗೆ ಜಿಲ್ಲಾಧಿಕಾರಿ ಆಗಿ ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿಯಿದೆ. ನಿಮ್ಮ ಮನವಿ ಸ್ವೀಕಾರ ಮಾಡಿರುವೆ. ಆದ್ರೆ ಜಿಲ್ಲಾಧಿಕಾರಿ ಆಗಿ ನಾನು ತೆಗೆದುಕೊಳ್ಳುವ ನಿರ್ಧಾರಕ್ಕೆ ನೀವು ಬದ್ಧರಾಗಿ ಇರಲೇಬೇಕು. ಗಡಿ ವಿವಾದ ಸುಪ್ರೀಂ ಕೋರ್ಟನಲ್ಲಿದೆ ಎಂದ ಎಂಇಎಸ್ ಪುಂಡರಿಗೆ ಕಾನೂನು ಸುವ್ಯವಸ್ಥೆ ಹಾಳಾದ್ರೆ ಸುಪ್ರೀಂ ಕೋರ್ಟ್ ನನ್ನನ್ನು ಕರೆಸುತ್ತದೆ ಎಂದು ಪ್ರತಿಕ್ರಿಯೆ ನೀಡಿದರು.

Edited By : Somashekar
Kshetra Samachara

Kshetra Samachara

15/10/2024 04:27 pm

Cinque Terre

4.24 K

Cinque Terre

0

ಸಂಬಂಧಿತ ಸುದ್ದಿ