ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಾವಿರಾರು ಪ್ರಯಾಣಿಕರ ಆಗಮನಕ್ಕೆ, ಗುಬ್ಬಿ ಗೂಡಾದ ಬಸ್ ತಂಗುದಾಣ....!

ರಾಯಬಾಗ : ಮುಗಳಖೋಡ ಎಂದರೆ ಐದು ರಾಜ್ಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿರುವಂತಹ ಪುಣ್ಯಕ್ಷೇತ್ರ. ಇದಕ್ಕೆ ಕಾರಣ ಪಟ್ಟಣದ ಆರಾಧ್ಯ ದೈವ ಶ್ರೀ ಯಲ್ಲಾಲಿಂಗ ಮಹಾರಾಜರ ಬೃಹನ್ಮಠ. 360 ಶಾಖಾ ಮಠಗಳನ್ನು ಹೊಂದಿರುವ ಈ ಮಹಾಮಠ ಐದು ರಾಜ್ಯಗಳಿಂದ ಭಕ್ತರು ಆಗಮಿಸುತ್ತಾರೆ. ಅಲ್ಲದೆ ಮುಗಳಖೋಡ ಪಟ್ಟಣದಿಂದ ಅನೇಕ ಜನ ವಿದ್ಯಾರ್ಥಿ/ವಿದ್ಯಾರ್ಥಿನಿಯರು ವಿದ್ಯಾರ್ಜನೆಗಾಗಿ ಬೇರೆ ಬೇರೆ ಊರುಗಳಿಗೆ ತೆರಳುತ್ತಾರೆ. ಆದರೆ ಈ ಇಂತಹ ಜನಸಂದಣಿಯ ಈ ಪಟ್ಟಣಕ್ಕೆ ಇರುವುದು ಕೇವಲ 20 ರಿಂದ 30 ಜನ ಪ್ರಯಾಣಿಕರು ಕುಳಿತುಕೊಳ್ಳುವಂತಹ ಪುಟ್ಟ ಬಸ್ ನಿಲ್ದಾಣ.

ಇನ್ನೂ ಈ ಪಟ್ಟಣಕ್ಕೆ ಆಗಮಿಸುವ ವಸ್ತಿ ಬಸ್ ಗಳು ಶ್ರೀ ಯಲ್ಲಾಲಿಂಗ ಮಹಾರಾಜರ ಬೃಹನ್ಮಠವನ್ನೇ ಆಶ್ರಯಿಸಬೇಕು. ಜಾತ್ರೆಯ ಸಮಯದಲ್ಲಂತು ಸಂಗೊಳ್ಳಿ ರಾಯಣ್ಣ ವೃತ್ತದಿಂದ ಸ್ವಾಮಿ ವಿವೇಕಾನಂದ ವೃತ್ತದವರೆಗೆ ಹೇಳತೀರದಷ್ಟು ಜನಸಂದಣಿ ಹಾಗು ಪರಿಸರ ಮಾಲಿನ್ಯ ಉಂಟಾಗುತ್ತದೆ. ಕಾರಣ ಆಗಮಿಸಿವ ಭಕ್ತರಿಗೆ ಹಾಗು ಪ್ರಯಾಣಿಕರಿಗೆ ಸಮರ್ಪಕ ಸ್ನಾನ ಗ್ರಹಗಳು ಹಾಗು ಶೌಚಾಲಯಗಳ ಕೊರತೆ.

ಈ ಎಲ್ಲ ಸಮಸ್ಯೆಗೆ ಸೂಕ್ತ ಪರಿಹಾರವೆಂದರೆ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣವಾದರೆ ಕೊಂಚ ಹತೋಟಿಯಲ್ಲಿ ತರಬಹುದು ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಈ ಕುರಿತು ಗಣ್ಯರು ಎನ್ ಹೇಳ್ತಾರೆ ಅಂತ ಕೇಳೋಣ ಬನ್ನಿ.

Edited By : Somashekar
PublicNext

PublicNext

15/10/2024 03:10 pm

Cinque Terre

14.87 K

Cinque Terre

0

ಸಂಬಂಧಿತ ಸುದ್ದಿ