ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಗವಾಡ: 35 ವರ್ಷಗಳಿಂದ ಬಸವೇಶ್ವರ ಏತ ನೀರಾವರಿ ಯೋಜನೆ ಹೆಸರಿನಲ್ಲೆ ಚುನಾವಣೆ - ಈಗ ನಾಯಕರಿಂದ ನಿರಾಸೆಯ ಮಾತು

ಕಾಗವಾಡ: ರಾಜ್ಯದಲ್ಲಿ ಗ್ಯಾರಂಟಿ ಮೂಲಕ ಗೆದ್ದು ಬಿಗಿದ ಕಾಂಗ್ರೆಸ್ ಸರ್ಕಾರ ಎರಡು ವರ್ಷಗಳ ಕಾಲಾವಧಿಯಲ್ಲಿ ಹಲವು ಸಮಸ್ಯೆಗಳನ್ನ ಎದುರಿಸುವಂತಾಯಿತು. ಮೂಡ ಹಗರಣ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳಲ್ಲೂ ಹಿನ್ನಡೆ ಕಂಡುಬಂದಿದೆ. ಇಷ್ಟು ದಿನ ಜನಸಾಮಾನ್ಯರು ಹಾಗೂ ವಿರೋಧ ಪಕ್ಷದ ನಾಯಕರ ಟಿಕೆಗೆ ಗುರಿಯಾದ ಸಿಎಂ ಸಿದ್ದು ಸರ್ಕಾರ ಈಗ ತಮ್ಮದೆ ಶಾಸಕರಿಂದ ಅಸಮಾಧಾನ ಮಾತು ಕೇಳಿಬರುತ್ತಿವೆ. ಕಾಗವಾಡ ಶಾಸಕ ರಾಜು ಕಾಗೆ ಕೆಲ ವೇದಿಕೆಗಳ ಮೇಲೆ ಬಹಿರಂಗವಾಗಿಯೇ ಸರ್ಕಾರದ ಲೋಪದೋಷಗಳ ವಿರುದ್ಧ ಟಿಕಾ ಪ್ರಹಾರ ನಡೆಸಿದ್ದು ರಾಜ್ಯ ರಾಜಕೀಯದಲ್ಲಿ ಗೊಂದಲ ಸೃಷ್ಟಿಸಿದೆ.

ಅಷ್ಟೇ ಅಲ್ಲದೆ ಆಯಾ ಇಲಾಖೆ ಅಧಿಕಾರಿಗಳ ವಿರುದ್ಧ ವಾಗ್ದಾಳಿ ನಡೆಸಿದ ಶಾಸಕ ರಾಜು ಕಾಗೆ, ನಮ್ಮ ಮಾತು ಯಾರು ಕೇಳುತ್ತಿಲ್ಲ ಎಂಬ ಅಸಮರ್ಥತೆಯ ಮಾತು ಕೇಳಿಬಂದಿದೆ. ಹಾಗಾದ್ರೆ ರಾಜು ಕಾಗೆ ಮಾತ್ನಾಡ್ತಿರೋದರ ಹಿಂದೆ ಬಲವಾದ ಕಾರಣ ಇದೆಯಾ? ಬಸವೇಶ್ವರ ಏತ ನೀರಾವರಿ ವಿಚಾರವಾಗಿ ಈ ಹಿಂದೆಯೂ ಒಳಗುದ್ದಾಟ ನಡೆದಿತ್ತು. ಹಿಂದಿನ ಬಿಜೆಪಿ ಸರಕಾರದ ಕಲಾವಧಿಯ ನೀರಾವರಿ ಸಚಿವ ಗೋವಿಂದ ಕಾರಜೋಳ ಅಷ್ಟೇನು ಆಸಕ್ತಿ ತೋರಿಲ್ಲ ಎಂಬ ಮಾತು ಕೇಳಿಬಂದಿತ್ತು. ಅದರ ಬೆನ್ನಲ್ಲೆ ಈಗ ಮತ್ತೆ ಶಾಸಕ ರಾಜು ಕಾಗೆ ಸರ್ಕಾರದ ವಿರುದ್ಧ ಸಿಡಿ ಮಿಡಿ ಮಾಡಿದ್ದು ಎಲ್ಲೊ ಬಸವೇಶ್ವರ ಏತ ನೀರಾವರಿ ಯೋಜನೆಗೆ ತಮ್ಮದೆ ಸರ್ಕಾರದ ಕಾಣದ ಕೈಗಳು ಷಡ್ಯಂತ್ರ ರೂಪಿಸುತ್ತಿವೆಯಾ ಅನ್ನೋ ಅನುಮಾನ ಕಾಡುತ್ತಿದೆ.

35 ವರ್ಷಗಳಿಂದ ನೀರಾವರಿ ಯೋಜನೆ ಹೆಸರಿನಲ್ಲೆ ಚುನಾವಣೆ ನಡೆಸಿದ ನಾಯಕರ ನಿರಾಸೆಯ ಮಾತು ಗಡಿ ಜನರಿಗೆ ಗುಳೆ ಹೋಗುವ ಅಂತಕ ತಂದೊಡ್ಡಿದೆ. ಏನೆ ಆಗಲಿ ರಾಜಕಾರಣಿಗಳು ಬಡ ಜನರ ಬದುಕಿನ ಜೊತೆ ಆಟಆಡುತ್ತಿರುವುದು ದುರಂತವೇ ಸರಿ.

ಲಕ್ಷ್ಮಣ ಕೋಳಿ ಪಬ್ಲಿಕ್ ನೆಕ್ಸ್ಟ್ ಚಿಕ್ಕೋಡಿ

Edited By : Manjunath H D
PublicNext

PublicNext

13/10/2024 11:19 am

Cinque Terre

35.09 K

Cinque Terre

0

ಸಂಬಂಧಿತ ಸುದ್ದಿ