ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಹೂವಿನ ಬೆಲೆ ಕುಸಿತ, ರೈತರಿಗೆ ಶಾಕ್

ಬೆಳಗಾವಿ: ವಿಜಯದಶಮಿಗೆ ಕೌಂಟ್ ಡೌನ್ ಆರಂಭವಾಗಿದ್ದು, ಹಬ್ಬಕ್ಕೆ ಹೂವಿನ ಬೆಲೆ ದುಬಾರಿಯಾಗಿದೆ ಅಂದುಕೊಂಡಿದ್ದ ಜನರಿಗೆ ಸ್ವಲ್ಪ ಮಟ್ಟಿನ ಹೂವಿನ ಬೆಲೆ ಕುಸಿತ ಕಂಡಿದೆ. ಉತ್ತಮ ಬೆಲೆಯ ನಿರೀಕ್ಷೆಯಲ್ಲಿ ಹೂವಿನ ಮಾರುಕಟ್ಟೆಗೆ ಬಂದಿದ ರೈತರಿಗೆ ಶಾಕ್ ಎದುರಾಗಿದೆ.

ಹೂವಿನ ಬೆಲೆ ಕೇಳಿ ಗ್ರಾಹಕರು ಶಾಕ್ ಆಗುತ್ತಿದ್ದರು. ಇಂದಿನಿಂದ ಎರಡು ದಸರಾ ಹಬ್ಬ ಹಾಗೂ ಮುಂದೆ ಬರುವ ದೀಪಾವಳಿ ಹಬ್ಬಕ್ಕೆ ಹೂವಿನ ಬೆಲೆ ಗಗನಕ್ಕೆ ಏರಿಕೆಯಾಗುತ್ತೆ ಎನ್ನಲಾಗಿತ್ತು. ಆದರೆ ಕಳೆದ ಎರಡು ಮೂರು ದಿನಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಹೂವಿನ ವ್ಯಾಪಾರದ ಮೇಲೆ ಪರಿಣಾಮ ಬೀರಿದೆ. ಬೆಳಗಾವಿ ಹೂವಿನ ಮಾರುಕಟ್ಟೆಯಲ್ಲಿ ಸೆಂಟ್ ವೈಟ್, ಬಿಬಿಡಾಲ್, ಪುರ್ಣಿಮಾ, ಗಲಾಟ, ಚಂಡು, ಗುಲಾಬಿ, ಆಸ್ಟರ್, ರಾಣಿ ವೈಟ್, ಮಲ್ಲಿಗೆ, ಆಬುಲಿ, ಜರ್ಬೇರ ಸೇರಿದಂತೆ 15ಕ್ಕೂ ಹೆಚ್ಚು ಪ್ರಕಾರದ ಹೂಗಳು ಮಾರಾಟವಾಗುತ್ತೆ. ಮಳೆಗೆ ಸಿಲುಕಿದ ಹೂಗಳು ಡ್ಯಾಮೇಜ್ ಆಗಿದೆ. ಇದರಿಂದ ಉತ್ತಮ ಆದಾಯದ ನಿರೀಕ್ಷೆಯಲ್ಲಿದ ರೈತರಿಗೆ ನಿರಾಸೆಯಾಗಿದೆ.

ಬೆಳಗಾವಿ ಹೂವಿನ ಮಾರುಕಟ್ಟೆ ಉತ್ತರ ಕರ್ನಾಟಕದಲ್ಲಿ ದೊಡ್ಡ ಮಾರುಕಟ್ಟೆಯಾಗಿದೆ.‌ ಹಾಗಾಗಿ ಅನೇಕ ಭಾಗದಿಂದ ರೈತರು ಹೂ ಮಾರಾಟಕ್ಕೆ ಬರುತ್ತಾರೆ. ಹೆಚ್ಚಾಗಿ ರಾಣಿ ವೈಟ್, ಮತ್ತು ಚಂಡು, ಪೂರ್ಣಿಮಾ ಹೂ ಬೆಳೆಯಲಾಗುತ್ತೆ.‌ ಇಂದು ಬೆಳಗಾವಿ ಹೂವಿನ ಮಾರುಕಟ್ಟೆಯಲ್ಲಿ ಯಾವ ಹೂವಿಗೆ ಎಷ್ಟು ದರ ಇದೆ ಎಂದು ನೋಡುವುದಾದರೆ,‌ ಚಂಡು ಹೂ ಕೆಜಿಗೆ ಈ ಮೊದಲು 100 ರವರೆಗೆ ಮಾರಾಟವಾಗಿದೆ. ಆದರೆ ಈಗ 50-60 ರೂ.ಗೆ ಮಾರಾಟವಾಗುತ್ತಿದೆ. ಗುಲಾಬಿ ಹೂ 200-3೦0 ರೂ ಇತ್ತು. ಗುಲಾಬಿ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. ಪೂರ್ಣಿಮಾ ಹೂ ಈ ಹಿಂದೆ 100-150 ಕ್ಕೆ ಮಾರಾಟವಾಗಿದೆ. ಇಂದು 80-100 ರೂ.ಗೆ ಮಾರಾಟವಾಗುತ್ತಿದೆ. ರಾಣಿ ವೈಟ್ ಹೂ 150-200 ರೂ.ಗೆ ಮಾರಾಟವಾಗಿದ್ದು, ಈಗ 80-100 ರೂ.ಗೆ ಮಾರಾಟವಾಗುತ್ತಿದೆ.‌

ಒಟ್ಟಿನಲ್ಲಿ ಹಬ್ಬದ ಸಂದರ್ಭದಲ್ಲಿ ಹೂ ಖರೀದಿಗೆ ಜನ ತಂಡೋಪತಂಡವಾಗಿ ಖರೀದಿಗೆ ಮಾರುಕಟ್ಟೆಗೆ ಆಗಮಿಸುತ್ತಿದ್ದಾರೆ. ಅವಶ್ಯಕವಾಗಿರುವ ಹೂವಿನ ಬೆಲೆ ಕುಸಿತವಾಗಿದ್ದು, ಹಬ್ಬದ ಸಂದರ್ಭದಲ್ಲಿ ಜನ ಖುಷಿಯಿಂದ ಹಬ್ಬ ಆಚರಿಸಿದರೆ, ರೈತರಿಗೆ ನಿರಾಸೆಯಾಗಿದೆ.

ಪ್ರಲ್ಹಾದ ಪೂಜಾರಿ, ಬೆಳಗಾವಿ, ಪಬ್ಲಿಕ್ ನೆಕ್ಸ್ಟ್

Edited By : Somashekar
PublicNext

PublicNext

11/10/2024 04:46 pm

Cinque Terre

19.68 K

Cinque Terre

0

ಸಂಬಂಧಿತ ಸುದ್ದಿ