ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜಿಲ್ಲೆಯಾದ್ಯಂತ ಮಳೆ : ವಾಹನ ಸವಾರರ ಪರದಾಟ ,ಕೃಷಿಕರಿಗೂ ಆತಂಕ

ಉಡುಪಿ : ಜಿಲ್ಲೆಯಾದ್ಯಂತ ಮಂಗಳವಾರ ಬೆಳಿಗ್ಗಿನಿಂದಲೇ ಮಳೆಯಾಗುತ್ತಿದ್ದು ಮೋಡ ಮುಸುಕಿದ ವಾತಾವರಣ ನೆಲೆಸಿದೆ. ಬೆಳಿಗ್ಗಿನಿಂದ ಸುರಿಯುತ್ತಿರುವ ಮಳೆಯಿಂದಾಗಿ ವಾಹನ ಸವಾರರು ಪರದಾಡುವಂತಾಗಿದೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದ್ದು ಅಕ್ಟೋಬರ್ 22 ರವರೆಗೂ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ಸೋಮವಾರ ಕೂಡ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಿದ್ದ ಹವಾಮಾನ ಇಲಾಖೆ, ಇಂದು (ಮಂಗಳವಾರ) ಕೂಡ ಭಾರಿ ಮಳೆಯ ಮುನ್ಸೂಚನೆ ಕೊಟ್ಟಿದೆ.

ಉಡುಪಿ, ಕಾರ್ಕಳ,ಬ್ರಹ್ಮಾವರ ಮತ್ತು ಕುಂದಾಪುರ ತಾಲೂಕುಗಳಲ್ಲೂ ಉತ್ತಮ ಮಳೆಯಾಗುತ್ತಿದೆ. ಅಕ್ಟೋಬರ್ ತಿಂಗಳ ಮಧ್ಯದಲ್ಲಿ ಈ ರೀತಿ ಜಿಟಿಜಿಟಿ ಮಳೆಯಾಗುವುದು ವಿರಳ. ಮುಖ್ಯವಾಗಿ ಭತ್ತದ ಗದ್ದೆಗಳಿಗೆ ಮಳೆಯಿಂದಾಗಿ ತೊಂದರೆಯಾಗುತ್ತಿದ್ದು ಭತ್ತ ಕೃಷಿಕರು ಕಂಗಾಲಾಗಿದ್ದಾರೆ.ಇನ್ನು ದ್ವಿಚಕ್ರ ವಾಹನ ಸವಾರರಿಗೂ ಈ ಮಳೆ ಕಿರಿಕಿರಿ ಉಂಟು ಮಾಡುತ್ತಿದೆ.

Edited By : Somashekar
Kshetra Samachara

Kshetra Samachara

15/10/2024 03:28 pm

Cinque Terre

13.76 K

Cinque Terre

0

ಸಂಬಂಧಿತ ಸುದ್ದಿ