ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: "ಹಳೇ ಹುಬ್ಬಳ್ಳಿ ಗಲಾಟೆ" ಕಲ್ಲೇಟಿನಿಂದ ರಕ್ತಸಿಕ್ತವಾಗಿದ್ದ ಇನ್ಸ್ಪೆಕ್ಟರ್- ಆಸ್ಪತ್ರೆಗೆ ದಾಖಲಿಸಿದ ಸರ್ಪ್‌ರಾಜ್

ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಗಲಾಟೆ ಪ್ರಕರಣವನ್ನು ಹಿಂದೆ ತೆಗೆದುಕೊಳ್ಳುವ ನಿರ್ಧಾರವನ್ನು ರಾಜ್ಯದ ಕಾಂಗ್ರೆಸ್ ಸರಕಾರ ತೆಗೆದುಕೊಂಡಿದೆ.‌ ಆದ್ರೆ, ಈ ಗಲಾಟೆಯಲ್ಲಿ ಕಲ್ಲೇಟಿನಿಂದ ಗಾಯಗೊಂಡಿದ್ದ ಪೊಲೀಸ್ ಇನ್ಸ್ಪೆಕ್ಟರ್ ಅವರನ್ನು ಮುಸ್ಲಿಂ ವ್ಯಕ್ತಿಯೊಬ್ಬ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾನೆ.

2022ರಲ್ಲಿ ಹಳೇ ಹುಬ್ಬಳ್ಳಿಯಲ್ಲಿ ಸ್ಟೇಟಸ್ ವಿಚಾರಕ್ಕೇ ಶುರುವಾಗಿದ್ದ ಸಣ್ಣ ವಿಷಯ ಪೊಲೀಸ್ ಠಾಣೆ ಸೇರಿದಂತೆ ಪೊಲೀಸ್ ವಾಹನಗಳನ್ನು ಜಖಂ ಮಾಡಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಈ ವೇಳೆ ಅಲ್ಲೇ ಕರ್ತವ್ಯಕ್ಕೆ ಆಗಮಿಸಿದ ಇನ್ಸ್ಪೆಕ್ಟರ್ ಕಾಡದೇವರ ಮಠ ತಲೆಗೆ ಏಟು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಆಗ ಇದನ್ನು ನೋಡಿದ ಸರ್ಪ್‌ ರಾಜ್ ಎಂಬ ಮುಸ್ಲಿಂ ವ್ಯಕ್ತಿಯೇ ಇನ್ಸ್ಪೆಕ್ಟರ್ ಅವರನ್ನು ಕರೆದೊಯ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದನ್ನು ಸರ್ಪ್‌ ರಾಜ್ ಹೇಳಿದ್ದು ಹೀಗೆ...

ಹೀಗೆ ಹಲವು ಘಟನೆಗಳು ನಡೆದರೂ ರಾಜ್ಯ ಸರ್ಕಾರ ಇದೊಂದು ರಾಜಕೀಯ ಪ್ರೇರಿತ ಎಂದು ಹೇಳುತ್ತಿದೆ. ಸರ್ಕಾರಿ ಅಧಿಕಾರಿಗಳು ಅಂದ್ರೆ ಅವರು ಕೂಡಾ ಸರ್ಕಾರದ ಒಂದು ಅವಿಭಾಜ್ಯ ಅಂಗ ಎಂಬುದರ ಅರಿವಿಲ್ಲದೇ, ಗಲಭೆಕೋರರ ವಿರುದ್ಧ ದಾಖಲಾದ ಪ್ರಕರಣ ಹಿಂದೆ ತೆಗೆದುಕೊಳ್ಳುತ್ತಿರೋದು ಎಷ್ಟು ಸೂಕ್ತ ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

-ವಿನಯ ರೆಡ್ಡಿ, ಕ್ರೈಂ ಬ್ಯೂರೋ ಪಬ್ಲಿಕ್ ನೆಕ್ಸ್ಟ್

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

14/10/2024 10:02 pm

Cinque Terre

127.74 K

Cinque Terre

20

ಸಂಬಂಧಿತ ಸುದ್ದಿ