ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಬೆಳೆ ಸಮೀಕ್ಷೆ ಮಾಡಲು ತೆರಳಿದ್ದವರಿಗೆ ಎದುರಾದ ಕಾಡನೆಗಳು

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಾಡಾನೆಗಳ ಉಪಟಳ ಮುಂದುವರೆದಿದೆ. ಕಾಡಿನಿಂದ ನಾಡಿನತ್ತ ಮಾಡುತ್ತಿರುವ ಪುಂಡಾನೆಗಳು ದಾಂಧಲೆಯನ್ನು ಮತ್ತಷ್ಟು ಹೆಚ್ಚಿಸಿವೆ. ನರಸಿಂಹರಾಜಪುರ ತಾಲೂಕಿನ ಮಾಗುಂಡಿ ಗ್ರಾಮದಲ್ಲಿ ಬೆಳೆ ಸಮೀಕ್ಷೆ ಮಾಡಲು ತೆರಳಿದ್ದ ಗ್ರಾಮ ಸಹಾಯಕರಿಗೆ ಕಾಡಾನೆಗಳು ಎದುರಾಗಿವೆ. ಇದರಿಂದ ಭಯ ಭೀತರಾದ ಗ್ರಾಮ ಸಹಾಯಕ ಬದ್ರುದ್ದೀನ್ ಹಾಗೂ ಅವರ ಪುತ್ರ ತೋಟದಲ್ಲೇ ಅವಿತು ಕುಳಿತು ಗ್ರಾಮಸ್ಥರಿಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದಾರೆ. ತಕ್ಷಣ ಗ್ರಾಮಸ್ಥರು ಎಲ್ಲರಿಗೂ ವಿಷಯ ಮುಟ್ಟಿಸಿದ್ದಾರೆ. ಮಾಗುಂಡಿ ಗ್ರಾಮದ ಕಾಫಿ ತೋಟಗಳನ್ನೆಲ್ಲ ಸುತ್ತಾಡಿರುವ ಪುಂಡಾನೆಗಳು ಆಹಾರವನ್ನು ಅರಸುತ್ತಾ ಓಡಾಟ ನಡೆಸಿವೆ. ಜಿಲ್ಲೆಯಲ್ಲಿ ಒಂದೆಡೆ ರೈತರು ಮಳೆಯಿಂದ ಕಂಗೆಟ್ಟು ಹೋಗಿದ್ದರೆ. ಮತ್ತೊಂದೆಡೆ ಕಾಡನೆಗಳ ಕಾಡಾನೆಗಳ ಉಪಟಳದಿಂದ ಬೆಳೆಗಳನ್ನು ರಕ್ಷಿಸಿಕೊಳ್ಳುವುದು ಸವಾಲಾಗಿ ಪರಿಣಮಿಸಿದೆ.

Edited By : Suman K
Kshetra Samachara

Kshetra Samachara

14/10/2024 02:44 pm

Cinque Terre

1.9 K

Cinque Terre

0