ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಳ್ಳಕೆರೆ: ಮಹಿಳೆಯರಿಂದ 9 ದಿನ ಬನ್ನಿ ವ್ರತ ಆಚರಣೆ

ಚಳ್ಳಕೆರೆ: ಹಿಂದೂ ಸಂಸ್ಕೃತಿಯ ಪ್ರತಿಯೊಂದು ವೈದಿಕ ಆಚಾರ-ವಿಚಾರಗಳೂ ತನ್ನದೇ ಆದ ವೈಶಿಷ್ಟ್ಯಗಳಿಂದ ಕೂಡಿರುತ್ತದೆ. ಇದರಲ್ಲಿ ಶಮೀವೃಕ್ಷದ (ಬನ್ನಿಮರ) ವೈಶಿಷ್ಟ್ಯ ಒಂದು ವಿಶೇಷವಾಗಿದೆ.

ಮಹಿಳೆಯರಿಂದ ಮಾತನಾಡದೆ ವಿವಿಧ ಕಡೆ ಬನ್ನಿ ಮರಕ್ಕೆ 9 ದಿನಗಳ ಕಾಲ ನಸುಕಿನ ವೇಳೆ ವಿಶೇಷ ಪೂಜೆ ನೆರವೇರುತ್ತದೆ. ನಗರ ಹಾಗೂ ಗ್ರಾಮೀಣ ಭಾಗದ ಮಹಿಳೆಯರು ಪೂಜೆಯಲ್ಲಿ ಮೌನವಾಗಿದ್ದು, ಬನ್ನಿ ಮರಕ್ಕೆ ಒಂಬತ್ತು ದಿನಗಳ‌ ಕಾಲ ಮುಂಜಾನೆ ಐದು ಗಂಟೆಗೆ ಪೂಜೆಗೆ ಬೇಕಾಗಿರುವ ಸಾಮಗ್ರಿಗಳನ್ನು ಕೊಂಡು ಹೋಗಿ ಪೂಜಾ ಕಾರ್ಯ ನೆರವೇರಿಸಿ, ಬನ್ನಿ ಮರಕ್ಕೆ ಐದು ಸುತ್ತು ಪ್ರದಕ್ಷಿಣೆ ಹಾಕಿ, ಬನ್ನಿ ಮಹಾಕಾಳಿ ದೇವತೆಗೆ ನಮಸ್ಕರಿಸುತ್ತಾರೆ. ತಮ್ಮ ಇಷ್ಟಾರ್ಥಗಳು ಸಿದ್ಧಿಯಾಗಲಿ. ಲೋಕ ಕಲ್ಯಾಣವಾಗಲಿ ಎಂಬ ಉದ್ದೇಶದಿಂದ ಮಹಿಳೆಯರು 9 ದಿನಗಳ ಕಾಲ ಬನ್ನಿ ವ್ರತವನ್ನು ಕಟ್ಟು ನಿಟ್ಟಿನಿಂದ ಆಚರಿಸುತ್ತಾರೆ.

Edited By : Manjunath H D
PublicNext

PublicNext

12/10/2024 02:49 pm

Cinque Terre

28.21 K

Cinque Terre

0

ಸಂಬಂಧಿತ ಸುದ್ದಿ