ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ: ಮುಳ್ಳಿನ ಮೇಲೆ ಬಿದ್ದು ಭಕ್ತಿ ಸಮರ್ಪಣೆ

ಚಿತ್ರದುರ್ಗ- ದಸರಾ ಹಬ್ಬದ ಪ್ರಯುಕ್ತ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಉಪ್ಪಾರಹಟ್ಟಿಯ ಅಂತರಗಟ್ಟೆ ಅಮ್ಮನ ಜಾತ್ರಾ ಮಹೋತ್ಸವ ಪ್ರಯುಕ್ತ ಭಕ್ತರು ತಮ್ಮ ಇಷ್ಟಾರ್ಥ ಈಡೇರಿಸುವಂತೆ ಮುಳ್ಳಿನ ಮೇಲೆ ಎಗರಿ ಬೀಳುವ ಮೂಲಕ ಪ್ರದಕ್ಷಿಣೆ ಹಾಲಿ ತಮ್ಮ ಹರಕೆ ತೀರಿಸಿದ್ರು. ಕಾಡುಗೊಲ್ಲ ಸಮುದಾಯದಲ್ಲಿ ಈ ಮುಳ್ಳಿನ ಸೇವೆಯನ್ನು ದೇವರಿಗೆ ಸಮರ್ಪಿಸಲಾಗುತ್ತೆ. ತಮ್ಮ ಇಷ್ಟಾರ್ಥ ಈಡೇರಿಕೆಗೆ ಭಕ್ತರು ದೆವರಿಗೆ ಹರಕೆ ಹೊತ್ತಿದ್ದು, ಮುಳ್ಳಿನ‌ಮೇಲೆ‌ ಎಗರಿ, ಪ್ರದಕ್ಷಿಗೆ ಹಾಕಿ ತಮ್ಮ ಭಕ್ತಿ ಸರ್ಮಪೇ ಮಾಡ್ತಾರೆ. ಇದು‌ಮುಳ್ಳಿನ ಪವಾಡ ಎಂದೇ ಸುಪ್ರಸಿದ್ಧವಾಗಿದೆ. ಗ್ರಾಮದ ದೇವಸ್ಥಾನದ ಮುಂಭಾಗ ಮುಳ್ಳಿನ ರಾಶಿ ಹಾಕಲಾಗುತ್ತೆ. ಅದರ ಮೇಲೆ ಅಂಬಿನೋತ್ಸವ ಮುಗಿಸಿ ಬಂದ ದೇವಿಯನ್ನ ತುಸುಕಾಲ ವಿರಮಿಸಲು ಬಿಡ್ತಾರೆ. ತದನಂತರ ಮುಳ್ಳಿನ‌ ಮೇಲೆ ಬೀಳುವ ಮೂಲಕ ಪ್ರದಕ್ಷಿಣೆ ಹಾಕುವ ಮೂಲಕ‌ ತಮ್ಮ ಮುಳ್ಳಿನ ಸೇವೆ ಸಮರ್ಪಣೆ ಮಾಡಿದ್ರು. ಈ ವೇಳೆ ಸಾವಿರಾರು ಭಕ್ತರು ಮುಳ್ಳಿನ ಸೇವೆ ಕಣ್ತುಂಬಿಕೊಂಡು ದೇವಿಯ ಕೃಪೆಗೆ ಪಾತ್ರರಾದರು.

Edited By : Ashok M
PublicNext

PublicNext

15/10/2024 10:49 am

Cinque Terre

21.98 K

Cinque Terre

0

ಸಂಬಂಧಿತ ಸುದ್ದಿ