ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ: ಸರ್ವ ಜನಾಂಗದ ಮುಳ್ಳಿನ ಪವಾಡ : ಮಕ್ಕಳು ಕೂಡ ಮುಳ್ಳಾವಿಗೆಯಲ್ಲಿ ಭಾಗಿ

ಹೊಳಲ್ಕೆರೆ: ಅರೆಮಲೆನಾಡು ಹೊಳಲ್ಕೆರೆ ತಾಲೂಕಿನ ಉಪ್ಪಾರಹಟ್ಟಿ (ಬಾಲಿಹಾಳ್) ಹಾಗೂ ಹೊಸಹಟ್ಟಿಯಲ್ಲಿ ಗ್ರಾಮದಲ್ಲಿ ಕಳೆದ ನಾಲ್ಕೈದು ತಲೆ ಮಾರುಗಳಿಂದ ಮುಳ್ಳಿನ ಪವಾಡ ನಡೆಯುತಿದ್ದು, ಇಂದು ಪ್ರತೀ ವರ್ಷದಂತೆ ನಡೆಯಲಿದ್ದು, ಸರ್ವ ಜನಾಂದವರು ಕೂಡ ಈ ಪವಾಡದಲ್ಲಿ ಭಾಗಿಯಾಗುವುದು ಇಲ್ಲಿನ ವಿಶೇಷವಾಗಿದೆ.

ಅಂತರಗಟ್ಟೆಮ್ಮನ ಮುಳ್ಳಿನ ಪವಾಡ :

ಮುಳ್ಳಿನ ಪವಾಡಕ್ಕೂ ಒಂದು ದಿನ ಮೊದಲೇ ಗ್ರಾಮದವರು ದೇವಾಲಯಕ್ಕೆ ತೆರಳಿ ಶಕ್ತಿ ದೇವತೆಗೆ ವಿಶೇಷ ಪೂಜೆ ಸಲ್ಲಿಸುವರು, ನಂತರ ಮಡಿ ಮೈಲಿಗೆಯಿಂದ ಗುಡ್ಡ ಪ್ರದೇಶಕ್ಕೆ ತೆರಳುವರು. ಅಲ್ಲಿ ಜಾಲಿ ಮುಳ್ಳನ್ನು ಕಡಿದು ತರುವರು, ನಂತರ ದೇವಾಲಯದ ಮುಂದೆ ಮುಳ್ಳಿನ ರಾಶಿ ಹಾಕಲಾಗುವುದು.

ಉಪ್ಪಾರಹಟ್ಟಿ ಗ್ರಾಮದಲ್ಲಿ ಶ್ರೀ ಅಂತರಗಟ್ಟೆಮ್ಮ ದೇವಿ ನೆಲೆಸಿದ್ದು ಪ್ರತಿ ವರ್ಷ ದಸರಾ ಮಹೋತ್ಸವ ಆಚರಣೆ ನಡೆಯುತ್ತದೆ. ಶುಕ್ರವಾರ ಆಯುಧಪೂಜೆ ನಡೆದಿದ್ದು, ನಂತರ ಮೂರನೆ ದಿನ, ಅಂದರೆ ಸೋಮವಾರ ಬೆಳಗ್ಗೆ ದೇವಿಯ ಅಂಬಿನೋತ್ಸವ ಮುಗಿಸಿ ನೇರವಾಗಿ ದೇವಿಯು ಪಲ್ಲಕ್ಕಿ ಉತ್ಸವದೊಂದಿಗೆ ಮುಳ್ಳಿನ ರಾಶಿ ಬಳಿ ಆಗಮಿಸಲಿದೆ. ದೇವಿಯನ್ನು ಮೊದಲು ಮುಳ್ಳಿನ ರಾಶಿ ಮೇಲೆ ಕೆಲ ನಿಮಿಷ ಪ್ರತಿಷ್ಠಾಪಿಸಲಾಗುತ್ತದೆ. ನಂತರ ಪಲ್ಲಕ್ಕಿ ಹೊತ್ತ ಭಕ್ತರು ಹಾಗೂ ದೇವಿಯು ಮೈಮೇಲೆ ಬಂದಂತಹ ಭಕ್ತರು ಮುಳ್ಳಿನ ರಾಶಿ ಮೇಲೆ ಓಡಾಡುತ್ತಾರೆ.

Edited By : Nagaraj Tulugeri
Kshetra Samachara

Kshetra Samachara

14/10/2024 10:12 am

Cinque Terre

8.06 K

Cinque Terre

0

ಸಂಬಂಧಿತ ಸುದ್ದಿ