ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದುರ್ಗಾ ದೇವಿಯ ಕೆಂಡೋತ್ಸವ

ಚಿತ್ರದುರ್ಗ: ಚಿತ್ರದುರ್ಗ ತಾಲೂಕಿನ ವಿಜಾಪುರ ಗ್ರಾಮದಲ್ಲಿ ದಸರಾ ಹಬ್ಬದ ಮೊದಲ ವಾರದ ಮಂಗಳವಾರದಂದು ಶ್ರೀ ದುರ್ಗಾ ದೇವಿಯ ಕೆಂಡೋತ್ಸವ ನಡೆಸಿದ್ದಾರೆ. ಬೆಳಗಿಂದಲೇ ವಿಶೇಷವಾಗಿ ಶ್ರೀ ದುರ್ಗಾದೇವಿಯ ಪೂಜಾ ಕಾರ್ಯಗಳು ನಡೆಸಿ, ಸಾವಿರಾರು ಭಕ್ತರ ಸಮ್ಮುಖದಲ್ಲಿ ಶ್ರೀ ದುರ್ಗಾದೇವಿಯ ಕೆಂಡೋತ್ಸವವನ್ನು ನೆರವೇರಿಸಲಾಯಿತು.

ಗ್ರಾಮದ ಮಧ್ಯಭಾಗದಲ್ಲಿ ನೆಲೆಸಿರುವ ಶ್ರೀ ದುರ್ಗಾ ದೇವಿಯ ದೇವಸ್ಥಾನದ ಆವರಣದಲ್ಲಿ ಶ್ರೀ ದುರ್ಗಾ ದೇವಿಯವನ್ನ ಪಲ್ಲಕ್ಕಿಯಲ್ಲಿ ವಿಶೇಷವಾಗಿ ಅಲಂಕರಿಸಿ ಕೆಂಡದ ಗುಂಡಿಯನ್ನು ಆಯುಧದ ಮೂಲಕ ಹಬ್ಬವನ್ನು ಆಚರಿಸಿದ್ದಾರೆ.

ಒಟ್ಟಾರೆಯಾಗಿ ದಸರಾ ಹಬ್ಬದ ಮೊದಲ ವಾರದ ಶ್ರೀ ದುರ್ಗಾದೇವಿಯ ಕೆಂಡೋತ್ಸವವನ್ನು ನಡೆಸಿ ಗ್ರಾಮಸ್ಥರು ಹಬ್ಬವನ್ನ ಸಂಭ್ರಮಿಸಿದ್ದಾರೆ.

Edited By : Manjunath H D
PublicNext

PublicNext

15/10/2024 03:32 pm

Cinque Terre

17.35 K

Cinque Terre

0

ಸಂಬಂಧಿತ ಸುದ್ದಿ