ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಟಿ ತಮನ್ನಾ ಭಾಟಿಯಾಗೆ ED ವಿಚಾರಣೆ

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನಟಿ ತಮನ್ನಾ ಭಾಟಿಯಾ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ.

HPZ ಟೋಕನ್ ಮಹಾದೇವ್ ಆಯಪ್‌ ವಿರುದ್ಧ ಕೇಳಿಬಂದಿರುವ ಬರೋಬ್ಬರಿ 455ಕೋಟಿ ರೂ.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಮನ್ನಾ ನಂಟು ಹೊಂದಿರುವ ಆರೋಪ ಇದೆ, ಹೀಗಾಗಿ ಅವರನ್ನು ಗುವಾಹಟಿಯಲ್ಲಿ ವಿಚಾರಣೆಗೊಳಪಡಿಸಲಾಗಿದೆ.

ಈ ಅಪ್ಲಿಕೇಶನ್ ಪ್ರಚಾರ ಮಾಡಿದ್ದಕ್ಕಾಗಿ ವಿಚಾರಣೆ ನಡೆಸಲಾಗಿದೆ. ಆದರೆ ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ.

ಇಡಿ ಬೆಟ್ಟಿಂಗ್ ಮತ್ತು ಗೇಮಿಂಗ್ ಅಪ್ಲಿಕೇಶನ್‌ಗಳ ಮೇಲೆ ತೀವ್ರ ನಿಗಾ ಇಟ್ಟಿದ್ದು, ಚೀನೀ ಪ್ರಜೆಗಳಿಗೆ ಸಂಬಂಧಿಸಿದ 76 ಸಂಸ್ಥೆಗಳಿ ಸೇರಿದಂತೆ ಒಟ್ಟು 299 ಸಂ‍ಸ್ಥೆಗಳ ವಿರುದ್ಧ ತನಿಖೆ ನಡೆಸುತ್ತಿದೆ. ಕಳೆದ ವರ್ಷ, ಈ ಮಹಾದೇವ್‌ ಅಪ್ಲಿಕೇಶನ್‌ ಜತೆ ನಂಟು ಹೊಂದಿರುವ ಆರೋಪದಲ್ಲಿ ನಟರಾದ ರಣಬೀರ್ ಕಪೂರ್ ಮತ್ತು ಶ್ರದ್ಧಾ ಕಪೂರ್ ಸೇರಿದಂತೆ ಒಟ್ಟು 17ಬಾಲಿವುಡ್‌ ತಾರೆಯರನ್ನು ಇಡಿ ತನಿಖೆಗೊಳಪಡಿಸಲಾಗಿತ್ತು.

ಏಪ್ರಿಲ್ 2024 ರಲ್ಲಿ ಸಾಹಿಲ್ ಖಾನ್ ಬಂಧನದ ನಂತರ ಪ್ರಕರಣ ತೀವ್ರಗೊಂಡಿತು, ಅವರು ಮತ್ತೊಂದು ಬೆಟ್ಟಿಂಗ್ ಬ್ರ್ಯಾಂಡ್‌ಗೆ ಬ್ರಾಂಡ್ ಅಂಬಾಸಿಡರ್‌ ಆಗಿದ್ದರು. ಆದರೆ ಅಕ್ರಮ ಹಣ ವರ್ಗಾವಣೆಯಲ್ಲಿ ತಮ್ಮ ನೇರ ಪಾಲ್ಗೊಳ್ಳುವಿಕೆಯನ್ನು ನಿರಾಕರಿಸಿದರು. ಕಪಿಲ್ ಶರ್ಮಾ, ಹುಮಾ ಖುರೇಷಿ ಮತ್ತು ಹಿನಾ ಖಾನ್ ಅವರಂತಹ ಇತರ ಪ್ರಸಿದ್ಧ ವ್ಯಕ್ತಿಗಳನ್ನು ಸಹ ಮಹಾದೇವ್ ಅಪ್ಲಿಕೇಶನ್ ಅನ್ನು ಪ್ರಚಾರ ಮಾಡುವಲ್ಲಿ ತಮ್ಮ ಪಾತ್ರಗಳನ್ನು ಮತ್ತು ಅವರು ಸ್ವೀಕರಿಸಿದ ಹಣದ ಬಗ್ಗೆ ಸ್ಪಷ್ಟನೆ ನೀಡುವಂತೆ ಇಡಿ ಆದೇಶಿಸಿತ್ತು.

Edited By : Nirmala Aralikatti
PublicNext

PublicNext

18/10/2024 02:27 pm

Cinque Terre

25.39 K

Cinque Terre

0