ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

HPZ ಟೋಕನ್ ಮೊಬೈಲ್ ಅಪ್ಲಿಕೇಶನ್‌ ದೋಖಾ, ಈವೆಂಟ್‌ ಅಲ್ಲಿ ಭಾಗವಹಿಸಿದ್ದಕ್ಕೆ ತಮನ್ನಗೆ ಇಡಿ ವಿಚಾರಣೆ

ʼHPZ ಟೋಕನ್' ಮೊಬೈಲ್ ಅಪ್ಲಿಕೇಶನ್‌ಗೆ ಲಿಂಕ್ ಮಾಡಲಾದ ಮನಿ ಲಾಂಡರಿಂಗ್ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ನಟಿ ತಮನ್ನಾ ಭಾಟಿಯಾ ಅವರನ್ನು ಗುರುವಾರ ಗುವಾಹಟಿಯಲ್ಲಿ ಇಡಿ ವಿಚಾರಣೆಗೆ ಒಳಪಡಿಸಿದೆ.ʼHPZ ಟೋಕನ್' ಕಾರ್ಯಕ್ರಮದಲ್ಲಿ ನಟಿ ಒಮ್ಮೆ ಕಾಣಿಸಿಕೊಂಡು, ಹಣ ಪಡೆದುಕೊಂಡಿದ್ದಳು ಆದರೆ ನೇರವಾಗಿ ತಮನ್ನಾ ಮೇಲೆ ಯಾವುದೇ ಆರೋಪವಿಲ್ಲವೆಂದು ಮೂಲಗಳು ತಿಳಿಸಿವೆ.ಬಿಟ್‌ಕಾಯಿನ್‌ಗಳು ಮತ್ತು ಇತರ ಕೆಲವು ಕ್ರಿಪ್ಟೋಕರೆನ್ಸಿಗಳನ್ನು ಗಣಿಗಾರಿಕೆಯ ನೆಪದಲ್ಲಿ ಹಲವಾರು ಹೂಡಿಕೆದಾರರನ್ನು ʼHPZ ಟೋಕನ್' ಮೊಬೈಲ್ ಅಪ್ಲಿಕೇಶನ್‌ ವಂಚಿಸಿದೆ ಎಂದು ಆರೋಪವಿದೆ.299 ಘಟಕಗಳನ್ನು ನಮೂದಿಸಿ ಮಾರ್ಚ್‌ನಲ್ಲಿ ಇಡಿ ಚಾರ್ಜ್ ಶೀಟ್ ಸಲ್ಲಿಸಿತ್ತು.ಇವುಗಳಲ್ಲಿ, 76 ಘಟಕಗಳನ್ನು ಚೀನೀ ಪ್ರಜೆಗಳ ನಿಯಂತ್ರಣದಲ್ಲಿದ್ದು ಎರಡು ವಿದೇಶಿ ಪ್ರಜೆಗಳ ನಿಯಂತ್ರಣದಲ್ಲಿದೆ.ಕೊಹಿಮಾ ಪೊಲೀಸ್‌ನ ಸೈಬರ್ ಕ್ರೈಂ ಘಟಕ ದಾಖಲಿಸಿದ ಪ್ರಥಮ ಮಾಹಿತಿ ವರದಿಯಿಂದ ಈ ಪ್ರಕರಣ ಬೆಳಕಿಗೆ ಬಂದಿದೆ.

Edited By : Somashekar
PublicNext

PublicNext

18/10/2024 03:17 pm

Cinque Terre

9.58 K

Cinque Terre

0