ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ದಸರಾ ಹಬ್ಬದ ರಜೆ ಕೊಡದ ಕ್ರಿಶ್ಚಿಯನ್ ಶಾಲೆಗಳು : ಮುತಾಲಿಕ್ ಕಿಡಿ

ಧಾರವಾಡ: ನಾಡ ಹಬ್ಬ ದಸರಾಕ್ಕೆ ಸರ್ಕಾರವೇ 15 ದಿನಗಳ ಕಾಲ ಶಾಲೆಗೆ ಅಧಿಕೃತ ರಜೆ ಘೋಷಣೆ ಮಾಡಿದೆ. ಆದರೆ, ಕೆಲ ಕ್ರಿಶ್ಚಿಯನ್ ಶಾಲೆಗಳು ಸರ್ಕಾರದ ಆದೇಶವನ್ನು ಮೀರಿ ಶಾಲೆಗಳನ್ನು ನಡೆಸುತ್ತಿವೆ ಎಂದು ಶ್ರೀರಾಮ ಸೇನೆ ಕಾರ್ಯಕರ್ತರು ಹಾಗೂ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಅವರು ಧಾರವಾಡದ ಬಾಸೆಲ್ ಮಿಶನ್ ಶಾಲೆಗೆ ತೆರಳಿ ಶಾಲೆಯ ಸಿಬ್ಬಂದಿಯೊಂದಿಗೆ ಮಾತುಕತೆ ನಡೆಸಿದರು.

ನಾಡಹಬ್ಬ ದಸರಾಕ್ಕೆ ರಜೆ ಘೋಷಣೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಕ್ರಿಶ್ಚಿಯನ್ ಶಾಲೆಗಳು ಪರೀಕ್ಷೆ ನಡೆಸುವ ಮೂಲಕ ಚರ್ಚೆಗೆ ಗ್ರಾಸವಾಗಿವೆ. ಹಿಂದೂ ಸಂಪ್ರದಾಯ, ಸಂಸ್ಕೃತಿಗೆ ಈ ಕ್ರಿಶ್ಚಿಯನ್ ಶಾಲೆಗಳು ಅಪಮಾನ ಮಾಡುತ್ತಿವೆ. ಸರ್ಕಾರದ ಆಜ್ಞೆಯನ್ನು ಈ ಶಾಲೆಗಳು ಉಲ್ಲಂಘನೆ ಮಾಡುತ್ತಿವೆ ಎಂದು ರಜೆ ಸಂದರ್ಭದಲ್ಲೂ ಪರೀಕ್ಷೆ ನಡೆಸಿದ ಕ್ರಿಶ್ಚಿಯನ್ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದರು.

ನಾಡಹಬ್ಬಕ್ಕೆ ರಜೆ ಘೋಷಣೆ ಮಾಡಲಾಗಿದೆ. ನಾಳೆಯಿಂದ ಶಾಲೆಗಳಿಗೆ ರಜೆ ಘೋಷಣೆ ಮಾಡಬೇಕು. ಇಲ್ಲದೇ ಹೋದರೆ ನಾವೇ ಬಂದು ಶಾಲೆಯನ್ನು ಬಂದ್ ಮಾಡಬೇಕಾಗುತ್ತದೆ ಎಂದು ಶ್ರೀರಾಮ ಸೇನೆ ಕಾರ್ಯಕರ್ತರು ಶಾಲಾ ಸಿಬ್ಬಂದಿಗೆ ಎಚ್ಚರಿಕೆ ನೀಡಿದರು. ಇದಕ್ಕೆ ಒಪ್ಪಿದ ಶಾಲಾ ಆಡಳಿತ ಮಂಡಳಿ ನಾಳೆಯಿಂದ ರಜೆ ಘೋಷಣೆ ಮಾಡುವುದಾಗಿ ಒಪ್ಪಿಕೊಂಡರು.

ಕ್ರಿಶ್ಚಿಯನ್ ಶಾಲೆಗಳಿಗೆ ಬರುವ ಹೆಣ್ಣು ಮಕ್ಕಳು ಬಳೆ ಇಟ್ಟುಕೊಳ್ಳುವಂತಿಲ್ಲ, ಕುಂಕುಮ ಹಚ್ಚಿಕೊಳ್ಳುವಂತಿಲ್ಲ. ಕಾಲ್ಗೆಜ್ಜೆ ಹಾಕಿಕೊಳ್ಳುವಂತಿಲ್ಲ. ಈ ರೀತಿ ನಮ್ಮ ಸಂಪ್ರದಾಯವನ್ನು ಅವಮಾನಿಸುವ ಕೆಲಸ ನಡೆದಿದೆ. ಸರ್ಕಾರದ ಆದೇಶ ಉಲ್ಲಂಘಿಸಿದ ಕ್ರಿಶ್ಚಿಯನ್ ಶಾಲೆಗಳ ಮಾನ್ಯತೆ ರದ್ದು ಮಾಡಬೇಕು. ಅನುದಾನವನ್ನೂ ವಾಪಸ್ ಪಡೆಯಬೇಕು. ಅಲ್ಲದೇ ರಜೆ ಸಂದರ್ಭದಲ್ಲಿ ಶಾಲೆ ನಡೆಸಿದವರನ್ನು ಬಂಧನ ಮಾಡಬೇಕು ಎಂದು ಮುತಾಲಿಕ್ ಆಗ್ರಹಿಸಿದರು.

ಈಗ ದಸರಾ ರಜೆ ಕೊಡದ ಕ್ರಿಶ್ಚಿಯನ್ ಶಾಲೆಗಳಿಗೆ ಕ್ರಿಸ್‌ಮಸ್ ರಜೆಯನ್ನು ರದ್ದು ಮಾಡಬೇಕು. ಬ್ರಿಟೀಷರ ಕಾಲದಿಂದಲೂ ಬಂದು ಈ ಕ್ರಿಸ್‌ಮಸ್ ರಜೆಯನ್ನು ಸರ್ಕಾರ ಕೂಡಲೇ ರದ್ದು ಮಾಡಬೇಕು ಎಂದು ಮುತಾಲಿಕ್ ಇದೇ ಸಂದರ್ಭದಲ್ಲಿ ಆಗ್ರಹಿಸಿದರು.

Edited By : Ashok M
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

08/10/2024 04:30 pm

Cinque Terre

72.62 K

Cinque Terre

8

ಸಂಬಂಧಿತ ಸುದ್ದಿ