ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ: "ಜನನ ಮರಣ ಇಲ್ಲದವರ ಜಯಂತಿ ಆಚರಣೆ ಸರಿಯಲ್ಲ, ವಿಶ್ವಕರ್ಮ ಮಹೋತ್ಸವ ಆಚರಿಸೋಣ"

ಬ್ರಹ್ಮಾವರ: ಶ್ರೀ ವಿಶ್ವಕರ್ಮ ಜಗದ್ಗುರು ಪೀಠ ಅರೆಮಾದನಹಳ್ಳಿ ಶಾಖಾ ಮಠ ಕಜ್ಕೆಯ ಶ್ರೀ ಅನ್ನಪೂರ್ಣೇಶ್ವರೀ ದೇವಸ್ಥಾನದಲ್ಲಿ 60 ದಿನಗಳ ಕಾಲ ಮಠದ ಪೀಠಾಧೀಶರಾದ ಶ್ರೀ ಶಿವಸುಜ್ಞಾನ ತೀರ್ಥ ಮಹಾ ಸ್ವಾಮೀಜಿಯವರ 42ನೇ ಚಾತುರ್ಮಾಸ್ಯ ವ್ರತಾಚರಣೆ ಸಂದರ್ಭ ದೇವಸ್ಥಾನದ ಅರ್ಚಕ ಸಂತೋಷ್ ಪುರೋಹಿತ್ ಪ್ರಧಾನ ಆಚಾರ್ಯತ್ವದಲ್ಲಿ ಶ್ರೀಗುರುಗಳ ಉಪಸ್ಥಿತಿಯಲ್ಲಿ ವಿಶ್ವಕರ್ಮ ಪೂಜಾ ಮಹೋತ್ಸವ ಮಠದಲ್ಲಿ ಜರುಗಿತು.

ಈ ಸಂದರ್ಭ ವಿಶ್ವಕರ್ಮ ಪೂಜೆಯ ಮಹತ್ವದ ಕುರಿತು ಸಂತೋಷ್ ಪುರೋಹಿತ್ ಮಾತನಾಡಿ, ವಿಶ್ವದ ಸೃಷ್ಟಿಕರ್ತ ವಿಶ್ವಕರ್ಮ ಭಗವಂತ ಹುಟ್ಟು ಮತ್ತು ಸಾವು ಇಲ್ಲದ ಅಜರಾಮರ. ಸರಕಾರವು ಜನನ- ಮರಣ ಪಡೆದ ವ್ಯಕ್ತಿಗಳಂತೆ ಜಯಂತಿ ಆಚರಣೆ ಮಾಡದೆ ಮಾನವರೆಲ್ಲರೂ ವಿಶ್ವಕರ್ಮ ಮಹೋತ್ಸವ ಮಾಡುವಂತಾಗಬೇಕು ಎಂದರು.

ರವೀಂದ್ರ ಪುರೋಹಿತ್ ಹೆಬ್ರಿ, ಮೂಲ ಮಠದ ಶಿಷ್ಯ ವರ್ಗ, ಕಜ್ಕೆ ಶ್ರೀ ಅನ್ನಪೂರ್ಣೇಶ್ವರೀ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಪದಾಧಿಕಾರಿಗಳು ಸೇರಿದಂತೆ ಅನೇಕ ಗಣ್ಯರು ಪೂಜಾ ಕಾರ್ಯದಲ್ಲಿ ಉಪಸ್ಥಿತರಿದ್ದರು.

Edited By : Vinayak Patil
PublicNext

PublicNext

19/09/2024 07:54 pm

Cinque Terre

14.09 K

Cinque Terre

0

ಸಂಬಂಧಿತ ಸುದ್ದಿ