ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಭಂಡಾರಕೇರಿ ಮಠಾಧೀಶರ ಚಾತುರ್ಮಾಸ್ಯ ಸಂಪನ್ನ- ನದೀ ತೀರದಲ್ಲಿ ಸೀಮೋಲ್ಲಂಘನ ವಿಧಿ

ಉಡುಪಿ: ಶ್ರೀ ಭಂಡಾರಕೇರಿ ಮಠಾಧೀಶ ಶ್ರೀ ವಿದ್ಯೇಶ ತೀರ್ಥ ಶ್ರೀಪಾದರು ಉಡುಪಿಯಲ್ಲಿ ಈ ಬಾರಿ ತಾವು ನಡೆಸಿದ ತಮ್ಮ 45 ನೇ ಚಾತುರ್ಮಾಸ್ಯ ವ್ರತವನ್ನು ಸಂಪನ್ನಗೊಳಿಸಿದರು.‌ ಪಟ್ಟದ ದೇವರ ಪೂಜೆಯ ಬಳಿಕ ವ್ರತದ ಮೃತ್ತಿಕೆಯನ್ನು ಶ್ರೀ ಕೃಷ್ಣಮಠದ ಮಧ್ವ ಸರೋವರದಲ್ಲಿ ವಿಸರ್ಜನೆಗೊಳಿಸಿದರು.‌

ಮಧ್ಯಾಹ್ನ ಭಿಕ್ಷೆ ಸ್ವೀಕರಿಸಿದ ಬಳಿಕ ಪಟ್ಟದ ದೇವರು ಮತ್ತು ಶಿಷ್ಯರೊಂದಿಗೆ ಉಡುಪಿ ನಗರದ ಸೀಮೆ ಉದ್ಯಾವರದ ಅಘನಾಶಿನಿ ನದೀ ತೀರಕ್ಕೆ ಬಂದರು.ಅಲ್ಲಿ ಅನೇಕ ಭಕ್ತರು ನಾಗರಿಕರು ಶ್ರೀಗಳನ್ನು ಆದರದಿಂದ ಬರಮಾಡಿಕೊಂಡ ಬಳಿಕ ಶ್ರೀಗಳು ನದಿಗೆ ಸೀಯಾಳಾಭಿಷೇಕ , ಅರಿಶಿನ ಕುಂಕುಮ ತಾಂಬೂಲ ದಕ್ಷಿಣೆ , ಸೀರೆ ರವಿಕೆ ಕಣ ಅಕ್ಕಿ ತೆಂಗಿನ ಕಾಯಿ ಫಲವಸ್ತುಗಳುಳ್ಳ ಬಾಗಿನ ಅರ್ಪಿಸಿ ಮಂಗಳಾರತಿ ಬೆಳಗಿಸಿ ಪ್ರಾರ್ಥನೆ ಸಲ್ಲಿಸಿದರು.

‌ನಂತರ ದೋಣಿಯ ನಾವಿಕನಿಗೆ ವಸ್ತ್ರ ಫಲ ಕೊಟ್ಟು ನದಿಯನ್ನು ದಾಟಿಸುವಂತೆ ಸೂಚಿಸಿದರು. ಶ್ರೀಗಳು ಪಟ್ಟದೇವರು ಹಾಗೂ ಕೆಲ‌ಶಿಷ್ಯರೊಂದಿಗೆ ದೋಣಿಯಲ್ಲಿ ಕುಳಿತರು. ನಾವಿಕ ಜಯರಾಮ್ ದೋಣಿ ಚಲಾಯಿಸಿ ನದಿ ಆಚೆ ತೀರಕ್ಕೆ ಶ್ರೀಗಳನ್ನು ಬೀಳ್ಕೊಟ್ಟರು.‌ ಈ ಸಂದರ್ಭ ಶಿಷ್ಯರು ಸ್ತೋತ್ರ ಪಠಣ ಗೈದು ಶ್ರೀ ಕೃಷ್ಣ ಶ್ರೀರಾಮ‌ ಮುಖ್ಯಪ್ರಾಣ ಮಧ್ವಗುರುಗಳು ಹಾಗೂ ಶ್ರೀಗಳಿಗೆ ಜೈಕಾರ ಹಾಕಿದರು. ಶ್ರೀನಿವಾಸ ಬಾದ್ಯ ಮತ್ತು ವಾಸುದೇವ ಭಟ್ ಪೆರಂಪಳ್ಳಿ ಸೀಮೋಲ್ಲಂಘನ ವಿಧಿಯನ್ನು ಸಂಯೋಜಿಸಿದರು.

Edited By : Manjunath H D
PublicNext

PublicNext

19/09/2024 12:56 pm

Cinque Terre

20.08 K

Cinque Terre

0

ಸಂಬಂಧಿತ ಸುದ್ದಿ