ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಟ್ಲ:ಪೆರುವಾಯಿ ವ್ಯವಸಾಯ ಸೇವಾ ಸಹಕಾರಿ ಸಂಘದ ಮಹಾಸಭೆಯಲ್ಲಿ ಅವ್ಯವಹಾರದ ಆರೋಪ : ಮಾತಿನ ಚಕಮಕಿ

ವಿಟ್ಲ: ಸಹಕಾರ ಸಂಘವೊಂದರ ಮಹಾಸಭೆಯಲ್ಲಿ ಸದಸ್ಯರುಗಳ ಪೈಕಿ ಕೆಲವರು ಸಂಘದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಅಧ್ಯಕ್ಷರು ಹಾಗೂ ಮುಖ್ಯಕಾರ್ಯನಿರ್ವಾಹಣಾಧಿಕಾರಿಯವರನ್ನು ತರಾಟೆಗೆ ತೆಗೆದುಕೊಂಡ ಘಟನೆ ಬಂಟ್ವಾಳ ತಾಲೂಕಿನ ಮಾಣಿಲ ಎಂಬಲ್ಲಿ ನಡೆದಿದೆ.

ಪೆರುವಾಯಿ ವ್ಯವಸಾಯ ಸೇವಾ ಸಂಘದ ಮಹಾಸಭೆಯು ಸಂಘದ ಅಧ್ಯಕ್ಷರಾದ ಗೀತಾನಂದ ಶೆಟ್ಟಿ ಮಾಣಿಲಗುತ್ತುರವರ ಅಧ್ಯಕ್ಷತೆಯಲ್ಲಿ ಮಾಣಿಲ ಶಾಖೆಯ ವಠಾರದಲ್ಲಿ ನಡೆದಿತ್ತು‌. ಈ ವೇಳೆ ಸಂಘದ ಸದಸ್ಯರ ಪೈಕಿ ಹಲವರು ನೆರೆದಿದ್ದು, ಸಂಘದ ಮಹಾಸಭೆ ಆರಂಭಗೊಂಡು ಲೆಕ್ಕಪತ್ರಗಳ ಮಂಡನೆ ನಡೆಯುತ್ತಿದ್ದ ವೇಳೆ ಸದಸ್ಯರುಗಳ ಪೈಕಿ ಕೆಲವರು ಕೆಲವೊಂದು ಲೆಕ್ಕಾಚಾರವನ್ನು‌ ಕೇಳಿದ್ದರು. ಆದರೆ ಸದಸ್ಯರುಗಳ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡುವಲ್ಲಿ ಸಂಘದ ಅಧ್ಯಕ್ಷರು ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿಯವರು ವಿಫಲರಾದ ಹಿನ್ನೆಲೆಯಲ್ಲಿ ಸದಸ್ಯರುಗಳು ಪಟ್ಟುಬಿಡದೆ ಲೆಕ್ಕಾಚಾರದ ಪಾರದರ್ಶಕತೆಯನ್ನು ತಿಳಿಸುವಂತೆ ಕೇಳಿಕೊಂಡಿದ್ದರು.

ಪ್ರಮುಖವಾಗಿ 01/04/2023 ರಿಂದ 31/03/2024ರ ವರೆಗಿನ ಜಮಾ ಖರ್ಚಿನಲ್ಲಿ ಅನೇಕ ಡಬಲ್ ಎಂಟ್ರಿಗಳು ಕಂಡುಬಂದಿದೆ. ಅಮಾನತು ಮೂಲ ಮತ್ತು ಖರ್ಚುಗಳ ಬಗ್ಗೆ ಸರಿಯಾದ ದಾಖಲೆಗಳನ್ನ ಮಹಾಸಭೆಯಲ್ಲಿ ಮಂಡಿಸದಿರುವುದು, 24/25ರ ಅಂದಾಜು ಬಜೆಟ್ ನ ಟೋಟಲ್ ವೆಚ್ಚಗಳಲ್ಲಿ ವ್ಯತ್ಯಾಸ, ಅಪೂರ್ಣವಾದ ಮಹಾಸಭೆ ವರದಿ ಇವೆಲ್ಲವನ್ನು ಸದಸ್ಯರುಗಳು ಪ್ರಶ್ನಿಸಿದರು. ಇದರ ಜೊತೆಗೆ ಮಹಾಸಭೆ ವರದಿಯಲ್ಲಿ ಅಜೆಂಡಾ, ಆಮಂತ್ರಣ, ಅಧ್ಯಕ್ಷ, ಕಾರ್ಯ ನಿರ್ವಹಣಾ ಅಧಿಕಾರಿಯ ಹೆಸರು ಇಲ್ಲದಿರುವುದರ ಬಗ್ಗೆಯೂ ಗಂಭೀರ ಆರೋಪಗಳನ್ನ ಮಾಡಿದರು. ಇನ್ನು ಕೆಲಕಾಲ ಸಭೆ ಗೊಂದಲದ ಗೂಡಾಗಿ ಪರಿಣಮಿಸಿತ್ತು. ಈ ನಡುವೆ ಲೆಕ್ಕಪರಿಶೋಧಕರ ವರದಿಯ ಸಂಕ್ಷಿಪ್ತ ಮಾಹಿತಿ ಕೂಡಾ ವರದಿ ಪುಸ್ತಕದಲ್ಲಿ ದಾಖಲಾಗದೇ ಇರುವುದುದಕ್ಕೆ ಭಾರೀ ಆಕ್ಷೇಪಗಳು ಕಂಡುಬಂತು.

ಈ ವೇಳೆ ಸಭೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿ ಸದಸ್ಯರುಗಳು ಹಾಗೂ ಸಂಘದ ಅಧ್ಯಕ್ಷರ ಮಧ್ಯೆ ಮಾತಿನ ಚಕಮಕಿನಡೆದಿತ್ತು‌. ಬಳಿಕ ಅಲ್ಲಿ ನೆರೆದಿದ್ದ‌‌ ಸದಸ್ಯರುಗಳ ಪೈಕಿ ಕೆಲವರು ಇತ್ತಂಡಗಳವನ್ನು ಸಮಾದಾನಿಸಿ ಪರಿಸ್ಥಿತಿ ಹತೋಟಿಗೆ ತಂದರು ಎಂದು ಮಾಹಿತಿ ಲಭಿಸಿದೆ.

ಈ ಬಗ್ಗೆ ಅಧ್ಯಕ್ಷೆ ಗೀತಾನಂದ ಶೆಟ್ಟಿ ಮಾತನಾಡಿ ಮಹಾಸಭೆಯಲ್ಲಿ ಯಾರೋ ಮೂವರು ರಾಜಕೀಯ ಪ್ರೇರಿತವಾಗಿ ಗೊಂದಲ ಸೃಷ್ಠಿಮಾಡಿ ಗಲಬೆ ಎಬ್ಬಿಸಿದ್ದಾರೆ ಬಿಟ್ಟರೆ ನಮ್ಮಲ್ಲಿ ಯಾವುದೇ ತರಹದ ಅವ್ಯವಹಾರ ನಡೆದಿಲ್ಲ. ನಮ್ಮಲ್ಲಿ ಎಲ್ಲಾ ತರಹದ ಲೆಕ್ಕಾಚಾರಗಳು ಪಾರದರ್ಶಕವಾಗಿದೆ.

ನಾವು ಈಗಾಗಲೇ ನಮ್ಮ ಹಳೇ ಕಟ್ಟಡವನ್ನು ಸುಮಾರು35 ಲಕ್ಷರೂಪಾಯಿ ವೆಚ್ಚದಲ್ಲಿ ವಿಸ್ತರಣೆ ಮಾಡಿದ್ದೇವೆ. ಅದರಲ್ಲಿ ಮೂರು ಅಂಗಡಿ ಬಾಡಿಗೆ ಕೊಣೆಗಳನ್ನು ನಿರ್ಮಾಣ ಮಾಡಿಕೊಂಡಿದ್ದೇವೆ‌. ನಮ್ಮಲ್ಲಿ ಯಾವುದೆ ಗೊಂದಲಗಳಿಲ್ಲ ಎಂದು ಹೇಳಿದ್ದಾರೆ

Edited By : PublicNext Desk
Kshetra Samachara

Kshetra Samachara

19/09/2024 07:04 am

Cinque Terre

438

Cinque Terre

0

ಸಂಬಂಧಿತ ಸುದ್ದಿ