ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು:ಭೂಸಂತ್ರಸ್ತರಿಗೆ ಕೊಂಕಣ ರೈಲ್ವೇಯಲ್ಲಿ ಉದ್ಯೋಗಾವಕಾಶ

ಮಂಗಳೂರು: ಕೊಂಕಣ ರೈಲ್ವೇ ನಿಗಮವು ಹಲವು ವರ್ಷಗಳ ಬಳಿಕ ಭೂಸಂತ್ರಸ್ತರಿಗೆ ಆದ್ಯತೆ ಕೊಟ್ಟು ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದೆ. ಸೆ. 16ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು ಅ. 6 ಕೊನೆಯ ದಿನ.

ನೇಮಕಾತಿಯಲ್ಲಿ ಮೊದಲ ಮೀಸಲಾತಿಯೇ ಭೂಸಂತ್ರಸ್ತ ಅರ್ಜಿದಾರರ ಮನೆಯವರಿಗೆ. ಕೊಂಕಣ ರೈಲ್ವೇ ಹಾದು ಹೋಗುವ ಜಿಲ್ಲೆಯಲ್ಲಿರುವ (ಕರಾವಳಿಯ ದ.ಕ., ಉಡುಪಿ, ಉ.ಕ. ಜಿಲ್ಲೆ) ಉದ್ಯೋಗ ವಿನಿಮಯ ಕೇಂದ್ರದಲ್ಲಿ ಹೆಸರು ನೋಂದಾಯಿಸಿಕೊಂಡವರು, ಕೊಂಕಣ ರೈಲ್ವೇ ಹಾದು ಹೋಗುವ ರಾಜ್ಯದವರು, ಈಗಾಗಲೇ ಮೂರು ವರ್ಷ ಸೇವೆ ಸಲ್ಲಿಸಿದವರಿಗೆ ಅನಂತರದ ಪ್ರಾತಿನಿಧ್ಯವಿರುತ್ತದೆ. ಅದರಲ್ಲಿಯೂ ಗ್ರೂಪ್ ಡಿ ಹುದ್ದೆಗಳೆಲ್ಲವನ್ನೂ ಭೂಸಂತ್ರಸ್ತರಿಗೆ ಮೀಸಲಿರಿಸಲಾಗಿದೆ.

ನಾವು ನಿಗಮದ ಆಡಳಿತ ನಿರ್ದೇಶಕರಿಗೆ ಮಾಡಿಕೊಂಡ ಮಾಡಿಕೊಂಡ ಮನವಿಯನುಸಾರ ಭೂಸಂತ್ರಸ್ತರಿಗೆ ಉದ್ಯೋಗಾವಕಾಶ ನೀಡಲಾಗಿದೆ. ಭೂಸಂತ್ರಸ್ತರು ಇದನ್ನು ಉಪಯೋಗಿಸಿಕೊಳ್ಳಬೇಕು' ಎಂದು ಕೆಆರ್‌ಸಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಮೋಹನ್ ಖೇಡೆಕರ್ ಮನವಿ ಮಾಡಿದ್ದಾರೆ.

ಪರೀಕ್ಷೆಯು ಸಿಬಿಟಿ (ಕಂಪ್ಯೂಟರ್ ಬೇಸ್ಟ್ ಟೆಸ್ಟ್) ಆಧಾರಿತವಾಗಿದೆ. ಅರ್ಜಿಯನ್ನು www. konkanrailway.com - Departments- Personnel - Recruitment Policy ಇಲ್ಲಿಗೆ ಸಲ್ಲಿಸಬಹುದು. ಸಂಶಯಗಳಿದ್ದಲ್ಲಿ helpdskrectcell@krcl.co.in. ಸಂಪರ್ಕಿಸಬಹುದು.

'

Edited By : PublicNext Desk
Kshetra Samachara

Kshetra Samachara

18/09/2024 10:01 pm

Cinque Terre

844

Cinque Terre

0

ಸಂಬಂಧಿತ ಸುದ್ದಿ