ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

‌ರಷ್ಯಾದಲ್ಲಿ ಇಳಿಮುಖವಾದ ಜನಸಂಖ್ಯೆ,ಕೆಲಸದ ಸಮಯದಲ್ಲಿ ಮಕ್ಕಳು ಮಾಡುವಂತೆ ಟಿಪ್ಸ್‌ ಕೊಟ್ಟ ಅಧ್ಯಕ್ಷ ಪುಟೀನ್

ರಷ್ಯಾ ದಲ್ಲಿ ಜನಸಂಖ್ಯೆ ತೀವ್ರವಾಗಿ ಇಳಿಮುಖವಾಗಿದ್ದು, ಇದಕ್ಕೊಂದು ಪರಿಹಾರ ಕಂಡುಕೊಂಡಿದ್ದಾರೆ ರಷ್ಯಾದ ಅಧ್ಯಕ್ಷರಾದ ಪುಟಿನ್.ಯಸ್‌, ಕೆಲಸದ ಸಮಯದಲ್ಲಿ ಮಹಿಳೆಯರು ಸಂತಾನೋತ್ಪತ್ತಿಯಲ್ಲಿ ತೊಡಗಿಸಿಕೊಳ್ಳುವಂತೆ ಕರೆ ಕೊಟ್ಟಿದ್ದಾರೆ.ರಾಷ್ಟ್ರದ ಜನಸಂಖ್ಯೆಯನ್ನು ಹೆಚ್ಚಿಸಲು ಉದ್ಯೋಗಿಗಳು ತಮ್ಮ ಊಟ ಮತ್ತು ಕಾಫಿ ಸಮಯವನ್ನು ಇದಕ್ಕಾಗಿ ಬಳಸಿಕೊಳ್ಳಬಹುದು ಎಂದಿದ್ದಾರೆ.ಸದ್ಯಕ್ಕೆ ಜನಸಂಖ್ಯೆ ಹೆಚ್ಚಳ ದೇಶದ ಪ್ರಮುಖ ಆದ್ಯತೆಯಾಗಿದ್ದು,ಭವಿಷ್ಯವೂ ಜನಸಂಖ್ಯೆ ಮೇಲೆ ಅವಲಂಬಿತವಾಗಿದೆ ಎಂದಿದ್ದಾರೆ.ಜನರು ಸದಾ ಬ್ಯುಸಿಯಾಗಿದ್ದು ಮಕ್ಕಳೆನ್ನುವ ಕಮಿಟೆ ಮೆಂಟ್‌ ಗೆ ಹೆದರುವಂತಾಗಿದೆ ಆದ್ದರಿಂದ ಅದನ್ನೆಲ್ಲಾ ಬದಿಗಿಟ್ಟು ಮಕ್ಕಳು ಮಾಡುವ ಗಮನ ಕೊಡಬೇಕೆಂದು ಆರೋಗ್ಯ ಸಚಿವ ಡಾ ಯೆವ್ಗೆನಿ ಶೆಸ್ಟೊಪಾಲೊವ್ ಪುಟಿನ್‌ ವಾದವನ್ನು ಅನುಮೋದಿಸಿದ್ದಾರೆ.ಮಾಸ್ಕೋದಲ್ಲಿ 18 ರಿಂದ 40 ವರ್ಷ ವಯಸ್ಸಿನ ಮಹಿಳೆಯರಿಗೆ ಉಚಿತ ಫಲವತ್ತತೆ ಮೌಲ್ಯಮಾಪನಕ್ಕೆ ಒಳಗಾಗಲು ಪ್ರೋತ್ಸಾಹಿಸುತ್ತಿದೆ.ಪುಟೀನ್‌ ಗೆ ಒಂಬತ್ತು ಮತ್ತು ಐದು ವರ್ಷ ವಯಸ್ಸಿನ ಇಬ್ಬರು ಗಂಡು ಮಕ್ಕಳಿದ್ದಾರೆ.ಮಾಜಿ ಒಲಿಂಪಿಕ್ ಜಿಮ್ನಾಸ್ಟ್ ಅಲೀನಾ ಕಬೇವಾ ಅವರ ಜೊತೆಗಿನ ವಿವಾಹೇತರ ಸಂಬಂಧದಿಂದ ಲೂಯಿಜಾ ಅನ್ನುವ ಮಗಳು ಜನಿಸಿದ್ದಾಳೆ.

Edited By : Somashekar
PublicNext

PublicNext

18/09/2024 07:33 pm

Cinque Terre

52.89 K

Cinque Terre

0

ಸಂಬಂಧಿತ ಸುದ್ದಿ