ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

‌ಶಕೀರಾ ಮಾತು ನಿರಾಕರಿಸಿ ವೀಡಿಯೋ ಶೂಟ್‌, ಡ್ರೆಸ್‌ ಸರಿ ಮಾಡಿಕೊಳ್ಳುತ್ತಲೇ ಕೋಪಗೊಂಡ ಗಾಯಕಿ..!

ಅಂತರಾಷ್ಟ್ರೀಯ ಗಾಯಕಿ ಶಕೀರಾ LIV ಮಿಯಾಮಿ ಕಾರ್ಯಕ್ರಮಕ್ಕೆ ಹಾಜರಾಗಿದ್ದ ವೇಳೆಹೊಸದಾಗಿ ಬಿಡುಗಡೆಯಾದ ಸೋಲ್ಟೆರಾ ಹಾಡಿಗೆ ನೃತ್ಯ ಮಾಡಲು ಅವಳನ್ನು ವೇದಿಕೆಯ ಮೇಲೆ ಆಹ್ವಾನಿಸಲಾಗಿದ್ದು,ವೇದಿಕೆಯ ಮೇಲೆ ಹತ್ತಿ ನೃತ್ಯ ಮಾಡಲು ಪ್ರಾರಂಬಿಸಿದ ನಂತರ ಅಲ್ಲಿ ನೆರೆದಿದ್ದ ಜನರು ಆಕೆಯ ಬಟ್ಟೆ ಮುಟ್ಟುವುದು,ವೀಡಿಯೋ ಮಾಡುವ ಮಾಲಕ ಇರುಸು ಮುರುಸು ಉಂಟು ಮಾಡಿದ್ದಾರೆ, ಶಕೀರ ವೀಡಿಯೋ ಚಿತ್ರೀಕರಿಸಬೇಡಿ ಎಂದು ಬೇಡಿಕೊಂಡರು ಅವಳ ವಿನಂತಿಯನ್ನು ನಿರಾಕರಿಸದ್ದಕ್ಕೆ ಶಕೀರ ಸ್ವಲ್ಪ ತನ್ನ ಟೆಂಪರ್‌ ಕಳೆದುಕೊಂಡಿದ್ದಾರೆ. ಈ ವೀಡಿಯೋ ನೋಡಿದವರು , "ಇದು ನಿಜವಾಗಿಯೂ ನಿರಾಶಾದಾಯಕ ನಡವಳಿಕೆಯಾಗಿದೆ, ಕಲಾವಿದರು ವೇದಿಕೆಯ ಮೇಲೆ ಮತ್ತು ಹೊರಗೆ ಗೌರವ ಮತ್ತು ಗೌಪ್ಯತೆಗೆ ಅರ್ಹರಾಗಿದ್ದಾರೆ" ಎಂದು ಕಮೆಂಟ್‌ ಹಾಕಿದರೆ,ಇನ್ನೊಬ್ಬ ಬಳಕೆದಾರ ಇವರನ್ನು ಲೈಂಗಿಕ ದೌರ್ಜನ್ಯಕ್ಕಾಗಿ ಬಂಧಿಸಬೇಕು, ಶಕೀರಾಗೆ ಹೊರನಡೆಯಲು ಎಲ್ಲ ಹಕ್ಕಿದೆ, ಯಾರೂ ಅಂತಹ ಅಗೌರವವನ್ನು ಎದುರಿಸಬೇಕಾಗಿಲ್ಲ, ಎಂದಿದ್ದಾನೆ.ಘಟನೆ ಬಗ್ಗೆ ಶಕೀರಾ ಇನ್ನೂ ಪ್ರತಿಕ್ರಿಯಿಸಿಲ್ಲ.

Edited By : Somashekar
PublicNext

PublicNext

16/09/2024 08:09 pm

Cinque Terre

26.93 K

Cinque Terre

0

ಸಂಬಂಧಿತ ಸುದ್ದಿ