ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತಿಂಗಳಿಗೊಮ್ಮೆ ಸ್ನಾನ ಮಾಡುವ ಪತಿರಾಯ, ವಾಸನೆ ಸಹಿಸಿಕೊಳ್ಳಲಾಗದೆ ಡಿವೋರ್ಸ್‌ ಮೊರೆ ಹೋದ ಪತ್ನಿ

ಮದುವೆಯಾದ 40 ದಿನಗಳಲ್ಲಿ ಪತ್ನಿಯು ಪತಿಯ ವಿರುದ್ಧ ಡಿವೋರ್ಸ್‌ ಕೇಸ್‌ ದಾಖಲಿಸಿದ್ದಾರೆ.ಈ ಡಿವೋರ್ಸ್‌ ಗೆ ಕಾರಣ ಕೇಳಿದ್ರೆ ಬೆರಗಾಗುತ್ತಿರಾ! ಯಸ್‌ ಪತಿರಾಯ ಹೈಜೀನ್‌ ಮೈಂಟೇನ್‌ ಮಾಡುವುದಿಲ್ಲ ಎನ್ನುವುದೇ ಈ ವಿಚ್ಛೇದನಕ್ಕೆ ಕಾರಣವಾಗಿದೆ.ಪ್ರತಿದಿನ ಆತ ಸ್ನಾನ ಮಾಡುವುದಿಲ್ಲವಂತೆ,ತಿಂಗಳಿಗೆ ಕೇವಲ ಒಂದು ಅಥವಾ ಎರಡು ಬಾರಿ ಈತ ಸ್ನಾನ ಮಾಡ್ತಾನೆ,ಸಹಿಸಲಾಗದಷ್ಟು ವಾಸನೆ ಹೊಡಿತಾನೆ ಎಂದು ಆಗ್ರಾದ ಮಹಿಳೆಯೊಬ್ಬರು ನೇರವಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.ಈ ಎಲ್ಲಾ ಎಲಿಗೇಶನ್‌ ನಡುವೆ ಪತಿರಾಯ ತನ್ನು ನಡವಳಿಕೆ ಬದಲಾಯಿಸಿಕೊಳ್ಳುವುದಾಗಿ ಭರವಸೆ ನೀಡಿದರೂ ಇದಕ್ಕೊಪದ ಪತ್ನಿ ನಗರದ ಕೌಟುಂಬಿಕ ಕೇಂದ್ರದಲ್ಲಿ ಪತಿ ವಿರುದ್ಧ ದೂರು ದಾಖಲಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಮಹಿಳೆ ತನ್ನ ಪೋಷಕರ ಮನೆಗೆ ಮರಳಿದ್ದಾಳೆ. ಬಳಿಕ ವರದಕ್ಷಿಣೆಗಾಗಿ ಮಹಿಳೆಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಆಕೆಯ ಕುಟುಂಬಸ್ಥರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಎನಿವೇಸ್‌ ಸೆಪ್ಟೆಂಬರ್ 22 ರಂದು ಕೌನ್ಸೆಲಿಂಗ್ ಕೇಂದ್ರಕ್ಕೆ ಮರಳಲು ದಂಪತಿಗೆ ತಿಳಿಸಲಾಗಿದೆ.

Edited By : Somashekar
PublicNext

PublicNext

16/09/2024 07:30 pm

Cinque Terre

19.81 K

Cinque Terre

1

ಸಂಬಂಧಿತ ಸುದ್ದಿ