ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ವರ್ಲ್ಡ್ ಸ್ಟೇಟ್ ಚಾಂಪಿಯನ್‌ಶಿಪ್‌ಗೆ ಹುಬ್ಬಳ್ಳಿಯ ತ್ರಿಶಾ ಜಡಾಲ ಆಯ್ಕೆ

ಹುಬ್ಬಳ್ಳಿ: ಇಟಲಿಯಲ್ಲಿ ನಡೆಯಲಿರುವ ವರ್ಲ್ಡ್ ಸ್ಕೇಟ್ ಗೇಮ್ಸ್ 2024ರಲ್ಲಿ ಹುಬ್ಬಳ್ಳಿ ರೋಲರ್ ಸ್ಕೇಟಿಂಗ್ ಅಕಾಡೆಮಿ ಸ್ಕೇಟರ್ ತ್ರಿಶಾ ಜಡಾಲ ಆಯ್ಕೆಯಾಗಿದ್ದಾರೆ.

ಕಳೆದ 10 ವರ್ಷಗಳಿಂದ ತ್ರಿಶಾ ಜಿಲ್ಲಾ ಮಟ್ಟದ, ರಾಜ್ಯಮಟ್ಟದ ಹಾಗೂ ರಾಷ್ಟ್ರೀಯ ಮಟ್ಟದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಪದಕ ಗೆದ್ದಿದ್ದು ಈಗ ಅಂತರಾರಾಷ್ಟ್ರೀಯ ಮಟ್ಟದ ವರ್ಲ್ಡ್ ಸ್ಕೇಟಿಂಗ್ 2024ರಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ.

ಈ ಸಾಧನೆಯನ್ನು ಕರ್ನಾಟಕ ರೋಲರ್ ಸ್ಕಟಿಂಗ್ ಪ್ರಧಾನ ಕಾರ್ಯದರ್ಶಿ ಇಂಧೂದರ ಸೀತಾರಾಂ, ಹುಬ್ಬಳ್ಳಿ ರೋಲರ್ ಸ್ಟೇಟಿಂಗ್ ಅಕಾಡೆಮಿಯ ಅಧ್ಯಕ್ಷೆ ನಿರ್ಮಲಾ ಸಿ.ಸಿ ಹಾಗೂ ಅಕಾಡೆಮಿಯ ತರಬೇತುದಾರ ಅಕ್ಷಯ್ ಸೂರ್ಯವಂಶಿ, ಸದಸ್ಯರು, ಪೋಷಕರು, ಧಾರವಾಡ ಜಿಲ್ಲಾ ರೋಲರ್ ಸ್ಟೇಟಿಂಗ್ ಅಸೋಸಿಯೇಷನ್ ಅಧ್ಯಕ್ಷರು, ಕಾರ್ಯದರ್ಶಿಗಳು ಪ್ರಶಂಸಿದ್ದಾರೆ.

Edited By : Vijay Kumar
Kshetra Samachara

Kshetra Samachara

18/09/2024 06:57 pm

Cinque Terre

6.27 K

Cinque Terre

0

ಸಂಬಂಧಿತ ಸುದ್ದಿ