ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮಲ್ಲಕಂಬದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಹುಬ್ಬಳ್ಳಿ ಹುಡುಗ ಅಯನ್

ಹುಬ್ಬಳ್ಳಿ : ಕೆಲವೊಂದು ಕಲೆಗಳು ಕೇವಲ ಪಠ್ಯಕ್ಕೆ ಮಾತ್ರ ಸೀಮಿತವಾಗಿದ್ದು, ಅವುಗಳ ಕುರಿತು ಇಂದಿನ ಮಕ್ಕಳು ಮಾಹಿತಿ ಪಡೆಯುತ್ತಿದ್ದಾರೆ. ಆದ್ರೆ ಇದೀಗ ಮಲ್ಲಕಂಬ ಕಲೆಯ ಕುರಿತು ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಅದರಲ್ಲಿ ನಮ್ಮ ಹುಬ್ಬಳ್ಳಿ ಹುಡುಗ ವಿಜೇತರಾಗಿ ಇದೀಗ ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ.

ಎಸ್,,, ಅವಳಿ ನಗರದ ಮಕ್ಕಳು ಒಂದಿಲ್ಲೊಂದು ಸಾಧನೆ ಮಾಡುತ್ತಲೇ ಹುಬ್ಬಳ್ಳಿ ಧಾರವಾಡ ಹೆಸರನ್ನು ಉತ್ತುಂಗಮಟ್ಟಕ್ಕೆ ಏರಿಸುತ್ತಿದ್ದಾರೆ. ಅದೇ ರೀತಿ ಅಯನ್ ಹುಸೈನ್ ನೂಲ್ವಿ ಎಂಬ ಹುಡುಗ ಈಗ ಮಲ್ಲಕಂಬದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಈ ಹುಡುಗ ಹುಬ್ಬಳ್ಳಿಯ ನವನಗರದ ರೋಟರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಇದೇ ಸೆಪ್ಟೆಂಬರ್ 13 ರಂದು ಪ್ರಥಮ ಬಾರಿಗೆ ಶಿರಗುಪ್ಪಿಯಲ್ಲಿ ನಡೆದ ಜಿಲ್ಲಾಮಟ್ಟದಲ್ಲಿ ಮಲ್ಲಕಂಬ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆ ಆಗಿದ್ದಾನೆ. ಮಲ್ಲಕಂಬದಲ್ಲಿ ಸಾಧನೆ ಮಾಡಲು ಹೊರಟ ಅಯನ್ ಹುಸ್ಸೇನ್ ಮತ್ತು ಅವರ ಗುರುಗಳು ಸಂತೋಷ ಅವರು ಹೇಳಿದ್ದು ಹೀಗೆ.

ಇನ್ನು ಈ ಅಯನ್ ಹುಸೈನ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ವಿಜೇತರಾಗಿ ಮಲ್ಲಕಂಬ ಕಲೆ ಕೇವಲ ಪಠ್ಯಕ್ಕೆ ಮಾತ್ರ ಅಲ್ಲ ಎಂಬುದನ್ನು ಸಾಬೀತು ಮಾಡಲಿ . ಹಾಗೆಯೇ ನಮ್ಮ ಅವಳಿ ನಗರದ ಹೆಸರನ್ನು ಅಚ್ಚಳಿಯದೆ ಉಳಿಯುವಂತೆ ಮಾಡಲಿ ಎಂಬುದು ನಮ್ಮ ಆಶಯ. ಇದೀಗ ಅಯನ್ ಹುಸೈನ್ ಮುಂದಿನ ಸ್ಪರ್ಧೆಗೆ ಕರ್ನಾಟಕ ಮಲ್ಲಕಂಬ ಅಕಾಡೆಮಿ ಹುಬ್ಬಳ್ಳಿ, ಮತ್ತು ಶಾಲೆಯ ಶಿಕ್ಷಕರು ಅಭಿನಂದನೆ ತಿಳಿಸಿದ್ದಾರೆ.

-ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

16/09/2024 01:05 pm

Cinque Terre

25.02 K

Cinque Terre

4

ಸಂಬಂಧಿತ ಸುದ್ದಿ