ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO : ಅತೀ ಸರಾಗವಾಗಿ ಭಾರತದೊಳಗೆ ನುಸುಳಿದ ಬಾಂಗ್ಲಾದೇಶಿ ಮುಸ್ಲಿಮ್‌ ಯುವಕರ ತಂಡ? - ಹೀಗೊಂದು ವಿಡಿಯೋ ವೈರಲ್‌

ಈ ಮೊದಲೆಲ್ಲಾ ಬಾಂಗ್ಲಾ ನುಸುಳುಕೋರರು ಭಾರತದ ಗಡಿ ಮೂಲಕ ದೇಶದದೊಳಗೆ ನುಸುಳುತ್ತಾರೆ ಎಂಬ ಸಾಕಷ್ಟು ಸುದ್ದಿಗಳು ಹರಿದಾಡುತ್ತಿದ್ದವು, ಇದಕ್ಕೆ ಪುಷ್ಟಿ ನೀಡುವಂತೆ ಇದೀಗ ವಿಡಿಯೋವೊಂದು ವೈರಲ್‌ ಆಗಿದೆ...

ಹೌದು... ಬಾಂಗ್ಲಾದೇಶಿ ಮುಸ್ಲಿಮ್‌ ಯುವಕರ ತಂಡವೊಂದು ಹೇಗೆ ಸುಲಭವಾಗಿ ಭಾರತದ ಗಡಿ ಮೂಲಕ ದೇಶದದೊಳಗೆ ಪ್ರವೇಶಿಸುತ್ತಾರೆ ಎಂಬುದನ್ನು ಈ ವಿಡಿಯೋದಲ್ಲಿ ನೀವು ನೋಡಬಹುದು..ಇಲ್ಲಿ ಎಂಟ್ರಿ ಕೊಟ್ಟಿದ್ದಲ್ಲದೇ ವಿಡಿಯೋ ಮೂಲಕ ಇದು ಭಾರತ,, ಅದು ಬಾಂಗ್ಲಾ ಎಂದು ವಿಡಿಯೋದಲ್ಲಿ ವಿವರಿಸಿದ್ದಾನೆ...

ಸದ್ಯ ಈ ವಿಡಿಯೋ ನೋಡಿದ ನೆಟ್ಟಿಗರು ಇಷ್ಟು ಸರಾಗವಾಗಿ ಭಾರತದೊಳಗೆ ನುಸುಳುಬಹುದಾ? ಅಲ್ಲಿ ಯಾವ ಕಾವಲು ಇಲ್ಲವಾ? ಕೆಲವೆಡೆ ಗಡಿಗಳಲ್ಲಿ ಇನ್ನೂ ಹೆಚ್ಚಿನ ನಿಗಾವಹಿಬೇಕಿದೆ ಎಂದು ಕಾಮೆಂಟ್‌ ಮೂಲಕ ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ..

ಸದ್ಯ ಆ ಯುವಕರ ತಂಡವು ನುಸುಳಿದ್ದು, ಯಾವ ಪ್ರದೇಶ, ಅಲ್ಲಿ ಸ್ಥಿತಿಗತಿ ಏನೆಂಬುದರ ಬಗ್ಗೆ ಹೆಚ್ಚಿನ ಮಾಹಿತಿ ವರದಿಯಾಗಿಲ್ಲ.. ಬಾಂಗ್ಲಾದೇಶಿ ಮುಸ್ಲಿಂ ಬ್ಲಾಗರ್‌ಯೊಬ್ಬ ಅಪ್‌ಲೋಡ್ ಮಾಡಿದ ಮೂಲ ವಿಡಿಯೋದಲ್ಲಿ ಈ ವಿಷಯ ತಿಳಿದುಬಂದಿದ್ದು, ಇದು ಅಸಲಿಯೋ.. ಇಲ್ಲವೋ? ಎಂಬುದು ತಿಳಿದುಬರಬೇಕಿದೆ.. ಅಲ್ಲದೇ ಈ ವಿಡಿಯೋವನ್ನು ಆ ಯುವಕ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ...

Edited By : Abhishek Kamoji
PublicNext

PublicNext

18/09/2024 09:24 am

Cinque Terre

83.47 K

Cinque Terre

11