ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

WATCH: ಈದ್ ಖುಷಿಯಲ್ಲಿ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿದ ಕಿಡಿಗೇಡಿಗಳು

ಭುಬನೇಶ್ವರ್: ಈದ್ ಮಿಲಾದ್ ಹಬ್ಬದ ಅತಿಯಾದ ಖುಷಿಯಲ್ಲಿದ್ದ ಕೆಲ ಮುಸ್ಲಿಮ್ ಯುಕವರು ಅಡ್ಡಾದಿಡ್ಡಿಯಾಗಿ ಕಾರುಗಳನ್ನು ಚಲಾಯಿಸಿದ್ದಾರೆ. ಈ ಮೂಲಕ ಇತರ ವಾಹನಗಳ ಸವಾರರಿಗೆ ಭಯ ಹುಟ್ಟಿಸಿದ್ದಾರೆ. ಒರಿಸ್ಸಾದ ಭುಬನೇಶ್ವರ ನಗರದ ಪ್ರಮುಖ ರಸ್ತೆಯೊಂದರಲ್ಲಿ ಈ ಘಟನೆ ನಡೆದಿದೆ.

ಕಿಡಿಗೇಡಿಗಳು ಸ್ವೇಚ್ಛಾಚಾರ ತೋರುತ್ತಿರುವ ವಿಡಿಯೋ ಹಿಂಬದಿ ವಾಹನ ಸವಾರರ ಮೊಬೈಲ್ ಫೋನ್‌ನಲ್ಲಿ ಸೆರೆಯಾಗಿದೆ. ಇದಿಷ್ಟೇ ಅಲ್ಲದೇ ಕೆಲ ಯುವಕರು ಕಾರಿನ ಕಿಟಕಿಯಿಂದ ಹೊರಗೆ ಕಾಣುವಂತೆ ಕುಳಿತಿದ್ದಾರೆ. ಇನ್ನೊಂದು ಕಾರಿನ ಚಾಲಕ ಕಾರನ್ನು ಪಾದಚಾರಿ ಮಾರ್ಗದಲ್ಲಿ ಹತ್ತಿಸಿದ್ದಾನೆ. ಬೇಕಾಬಿಟ್ಟಿಯಾಗಿ ಸಂಚಾರಿ ನಿಯಮ ಉಲ್ಲಂಘಿಸಿದ್ದೂ ಅಲ್ಲದೇ ಇತರರಿಗೆ ಭಯ ಹುಟ್ಟಿಸಿದ ಈ ಯುವಕರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Edited By : Nagaraj Tulugeri
PublicNext

PublicNext

17/09/2024 10:30 pm

Cinque Terre

120.14 K

Cinque Terre

17