ಬಳ್ಳಾರಿ : ಸೆಂಟ್ರಲ್ ಜೈಲಿನಲ್ಲಿರುವ ದರ್ಶನ ಈಗ ತಮಗೆ ಬೆಡ್, ತಲೆದಿಂಬು ಮತ್ತು ಚೇರ್ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರಂತೆ. ಆರೋಪಿಯ ಬೇಡಿಕೆಯನ್ನು ಜೈಲಿನ ಅಧಿಕಾರಿಗಳು ನಿರಾಕರಿಸಿದ್ದಾರಂತೆ.
ಇದೇ ಕಾರಣಕ್ಕೆ ಬಳ್ಳಾರಿ ಜೈಲ್ ಅಧಿಕಾರಿಗಳ ಮೇಲೆ ದರ್ಶನ ಕುಟುಂಬ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಲು ಸಿದ್ದರಾಗಿದ್ದಾರಂತೆ.
ಜೈಲ್ ಮ್ಯಾನುವಲ್ ನಲ್ಲಿರುವ ಸೌಲಭ್ಯ ಕೊಡುವ ವಿಚಾರದಲ್ಲೂ ಎಚ್ಚರಿಕೆಯ ಹೆಜ್ಜೆ ಇಡ್ತಿರೋ ಸಿಬ್ಬಂದಿ.
ಸೌಲಭ್ಯ ಕೊಟ್ಟರೆ ಇಲಾಖೆ ಮತ್ತು ಸರ್ಕಾರದಿಂದ ತಲೆದಂಡ ಆಗೋ ಭೀತಿ ಎದುರಿಸುತ್ತಿದ್ದು. ಮತ್ತೊಂದಡೆ ದರ್ಶನ್ ಕುಟುಂಬದ ಕೆಂಗಣ್ಣಿಗೆ ಗುರಿಯಾಗುವ ಆತಂಕವೂ ಇದೆ.
PublicNext
19/09/2024 02:56 pm