ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಈಗಾಗಲೆ ಮಹಿಳೆಯರ ಸುರಕ್ಷತೆ ಕುರಿತು, ಅವರ ಮೇಲೆ ಆಗುತ್ತಿರುವ ದೌರ್ಜನ್ಯ ಹಾಗೂ posh ಕಮಿಟಿ ರಚನೆ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಎರಡು ದಿನಗಳ ಹಿಂದಷ್ಟೇ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಅವರ ನೇತೃತ್ವದಲ್ಲಿ ಸಭೆ ಕೂಡ ನಡೆದಿದ್ದು, ಇಂದು ರಾಜ್ಯ ಮಹಿಳಾ ಆಯೋಗವು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದು, ಹೇಮಾ ಮಾದರಿ ಕಮಿಟಿ ರಚನೆಗೆ ಒತ್ತಡ ಹೆಚ್ಚಿದೆ.
ಚಲನಚಿತ್ರ ವಾಣಿಜ್ಯ ಮಂಡಳಿಗೆ ಡಾ. ನಾಗಲಕ್ಷ್ಮಿ ಅವರು 14 ಪ್ರಶ್ನೆಗಳನ್ನು ಕೇಳಿದ್ದಾರೆ ಹಾಗೂ ಆ ಪ್ರಶ್ನೆಗಳಿಗೆ ವಿವರಣೆ ಕೂಡುವಂತೆ ಮಹಿಳಾ ಆಯೋಗ ಒತ್ತಾಯಿಸುತ್ತಿದೆ. ಚಿತ್ರರಂಗದಲ್ಲಿ ನಾನಾ ವಿಭಾಗಗಳಲ್ಲಿ ಕೆಲಸ ಮಾಡ್ತಿರೋ ಮಹಿಳೆಯರ ಸುರಕ್ಷತೆಯ ಬಗ್ಗೆ, ಲೈಂಗಿಕ ಕಿರುಕುಳ ಹಾಗೂ ಮಹಿಳಾ ಸಂರಕ್ಷಣೆಯ ಬಗ್ಗೆ ಚಿತ್ರೋದ್ಯಮ ಕೈಗೊಂಡಿರೋ ಕ್ರಮಗಳ ಬಗ್ಗೆ, ಆಡಿಷನ್ ನೆಪದಲ್ಲಿ ಮಹಿಳೆಯರಿಗೆ ಕಿರುಕುಳ ಕೊಡೋ ಚಿತ್ರತಂಡಗಳ ಮೇಲೆಯೂ ಕಣ್ಣು ಇಟ್ಟಿದು ರಾಜ್ಯ ಮಹಿಳಾ ಆಯೋಗ ಕೇಳಿರುವ ಪ್ರಶ್ನೆಗಳಿಗೆ ವಿವರಣೆ ನೀಡುವಂತೆ ಉಲ್ಲೇಖಿಸಲಾಗಿದೆ.
PublicNext
19/09/2024 07:00 pm