ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕೆರೆ ಅಭಿವೃದ್ಧಿ ಹೆಸರಲ್ಲಿ ಹಣ ಲೂಟಿ? ಗೊಟ್ಟಿಗೆರೆ ಕೆರೆಗೆ ಬಂದಿರುವ ಪರಿಸ್ಥಿತಿ ನೋಡಿ

ಬೆಂಗಳೂರು: ಗ್ರೀನ್ ಸಿಟಿ, ಲೇಕ್ ಸಿಟಿ ಬೆಂಗಳೂರಿನಲ್ಲಿ ನೂರಾರು ಸ್ವಚ್ಛ, ಕುಡಿಯುವ ನೀರಿನ ಕೆರೆಗಳು ಹಚ್ಚ ಹಸಿರಾಗಿದ್ದವು. ಆದರೆ ಈಗ ಲೇಕ್ ಸಿಟಿಯಲ್ಲಿನ ಗೊಟ್ಟಿಗೆರೆ ಕೆರೆಗೆ ಬಂದಿರುವ ಪರಿಸ್ಥಿತಿ ನೋಡಿ.

2017ರಲ್ಲೇ ಒತ್ತುವರಿ ಆಗಿದ್ದ ಕೆರೆಗೆ ಲೋಕಾಯುಕ್ತ ಮತ್ತು ಕೆರೆ ಅಭಿವೃದ್ಧಿ ಪ್ರಾಧಿಕಾರ ಮರುಜೀವ ನೀಡಿತ್ತು. ಅದು ಕೂಡ 2013ರಿಂದ 'ವಿ ಸೇವ್' ಸಂಘಟನೆಯಿಂದ ಸತತ ಹೋರಾಟಕ್ಕೆ ಸಿಕ್ಕ ಪ್ರತಿಫಲ. ಆದರೆ ಇದೀಗ ಕೆರೆ ಅಭಿವೃದ್ಧಿಗೆಂದು 11 ಕೋಟಿ ಹಣ ಮೀಸಲಿಟ್ಟಿದರು. ಆದ್ರೂ ಕೂಡ, ಯಾವುದೇ ಅಭಿವೃದ್ಧಿ ಆಗಿಲ್ಲ. ಗೊಟ್ಟಿಗೆರೆ ಊರಿನ ಎಲ್ಲಾ ಮೋರಿ ನೀರು ಈ ಕೆರೆಗೆ ಬಂದು ಸೇರುತ್ತಿದೆ. ಗೊಟ್ಟಿಗೆರೆ ಕೆರೆಯನ್ನು ಕಾಪಾಡಿ ಎಂದು 'ವಿ ಸೇವ್ ' ಸಂಘಟನೆ ಮತ್ತೊಮ್ಮೆ ಧ್ವನಿ ಎತ್ತಿದೆ.

ಒಟ್ಟಾರೆ, ಹಚ್ಚ ಹಸಿರಾಗಿರಬೇಕಿದ್ದ ಕೆರೆ, ಇವತ್ತು ಕೋಟಿ ಕೋಟಿ ಅನುದಾನ ಮೀಸಲಿದ್ದರೂ ಕೂಡ ಗಬ್ಬು ನಾರುತ್ತಿದೆ. ಹಾಗಿದ್ರೆ ಅನುದಾನದ ಹಣ ಎಲ್ಲಿ ಹೋಯ್ತು ಅನ್ನೋದೇ ಇಲ್ಲಿನ ನಿವಾಸಿಗಳ ಪ್ರಶ್ನೆಯಾಗಿದೆ.

Edited By : Manjunath H D
PublicNext

PublicNext

17/09/2024 08:49 pm

Cinque Terre

43.74 K

Cinque Terre

1