ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಬಿಎಂಪಿಯಿಂದ ಆನ್‌ಲೈನ್ ಇ - ಖಾತಾ ಸೇವೆ ಆರಂಭ - ತುಷಾರ್ ಗಿರಿನಾಥ್

ಬೆಂಗಳೂರು: ಉಪ ಮುಖ್ಯಮಂತ್ರಿ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ನೇತೃತ್ವ ಮತ್ತು ನಿರ್ದೇಶನದಲ್ಲಿ ಬಿಬಿಎಂಪಿಯು ಫೇಸ್‌ಲೆಸ್‌, ಸಂಪರ್ಕ ರಹಿತ ಸೇವಯನ್ನು ಪ್ರಾರಂಭಿಸುತ್ತಿದೆ. ಇದರೊಂದಿಗೆ ಆನ್‌ಲೈನ್ ಡಿಜಿಟಲ್ ವ್ಯವಸ್ಥೆಯನ್ನು ಪ್ರಾರಂಭಿಸುತ್ತಿದೆ.

ಬಿಬಿಎಂಪಿಯು ರಿಜಿಸ್ಟರ್‌ಗಳಲ್ಲಿನ ಎಲ್ಲಾ 21 ಲಕ್ಷ ಖಾತಾಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ ಮತ್ತು ರೋಲ್-ಔಟ್ ಶೀಘ್ರದಲ್ಲೇ ಪ್ರಾರಂಭವಾಗುತ್ತದೆ.

ಇದರ ಭಾಗವಾಗಿ, ಮುಂದಿನ ದಿನಗಳಲ್ಲಿ ಬಿಬಿಎಂಪಿಯ ಸಿಬ್ಬಂದಿ ನಿಮ್ಮ ಮನೆಗಳಿಗೆ ಭೇಟಿ ನೀಡಿ ನಿಮ್ಮ ಆಸ್ತಿಯ ಜಿ.ಪಿ.ಎಸ್. (GPS coordinates) ಮಾಹಿತಿಯನ್ನು ಸೆರೆಹಿಡಿಯುತ್ತಾರೆ. ಪಾಲಿಕೆಯ eKhata ಪಡೆಯಲು ಪ್ರತಿ ಆಸ್ತಿಯ ಜಿ.ಪಿ.ಎಸ್ ಕಡ್ಡಾಯವಾಗಿದೆ.

ಸದರಿ ಪ್ರಾಪರ್ಟಿ GPS ನಿಮ್ಮ ಆಸ್ತಿಯ ವಿಶಿಷ್ಟ ಗುರುತು ಆಗಿರುತ್ತದೆ ಮತ್ತು ಎಲ್ಲಾ ಬಿಬಿಎಂಪಿಯ ಇ-ಖಾತಾ ಸೇವೆಗಳ ಫೇಸ್‌ಲೆಸ್, ಸಂಪರ್ಕರಹಿತ ಮತ್ತು ಆನ್‌ಲೈನ್ ವಿತರಣೆಗೆ ಇದು ಬಹಳ ಮುಖ್ಯವಾಗಿರುತ್ತದೆ.

ಆದ್ದರಿಂದ, ನಿಮಗೆ ಉತ್ತಮ ಸೇವೆ ನೀಡಲು ಬಿಬಿಎಂಪಿಯನ್ನು ಬಲಪಡಿಸಲು ನಿಮ್ಮ ಸಂಪೂರ್ಣ ಸಹಕಾರವನ್ನು ನೀಡುವಂತೆ ವಿನಂತಿಸುತ್ತೇನೆ. ಬಿಬಿಎಂಪಿಯು ಸದಾ ನಿಮ್ಮ ಸೇವೆಯಲ್ಲಿ ಹಾಗೂ ನಾವೆಲ್ಲ ಇಷ್ಟಪಡುವ ನಗರವನ್ನು ರಚಿಸಲು ಸಹಕರಿಸಿ ಎಂದು ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ತಿಳಿಸಿದ್ದಾರೆ‌.

Edited By : Nagaraj Tulugeri
Kshetra Samachara

Kshetra Samachara

19/09/2024 05:31 pm

Cinque Terre

766

Cinque Terre

0

ಸಂಬಂಧಿತ ಸುದ್ದಿ