ಬೆಂಗಳೂರು: ಚಾಮರಾಜಪೇಟೆ ದನದ ಕೆಚ್ಚಲು ಕೊಯ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಪಕ್ಷ ನಾಯಕ ಆರ್. ಅಶೋಕ್ ಪ್ರತಿಕ್ರಿಯಿಸಿದ್ದು, ಹಸುವಿನ ಕೆಚ್ಚಲು ಕತ್ತರಿಸದವನಿಗೆ ಮತಿಭ್ರಮಣೆ ಎಂದು ಕಾಂಗ್ರೆಸ್ ಹೇಳುತ್ತಿದೆ. ಆದರೆ ಮತಿಭ್ರಮಣೆ ಆಗಿರೋದು ಅವನಿಗಲ್ಲ ಈ ಸರ್ಕಾರಕ್ಕೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಆರೋಪಿಗೆ ತಲೆ ಸರಿಯಿಲ್ಲ ಎಂದು ಹೇಳುತ್ತಿದ್ದಾರೆ. ಅವನಿಗೆ ತಲೆ ಸರಿ ಇಲ್ಲ ಎಂದರೆ ಹತ್ತು ವರ್ಷ ಹೇಗೆ ಅವನು ಲೆದರ್ ಫ್ಯಾಕ್ಟರಿಲಿ ಕೆಲಸ ಮಾಡ್ತಾನೆ.? ಈ ಪ್ರಕರಣವನ್ನು ಮುಚ್ಚಿ ಹಾಕಲು ಯಾರನ್ನೋ ಕರೆತಂದು ಅವನೇ ಈ ಘಟನೆಗೆ ಕಾರಣ ಅಂತಿದಾರೆ ಎಂದು ಕಿಡಿಕಾರಿದರು.
ಹಸುವಿನ ಮಾಲೀಕ ಕರ್ಣನಿಗೆ ನಾವು ಹಣ ನೀಡಿದ್ದು ಹಸು ಖರೀದಿಗೆ ಅಲ್ಲ. ಗಾಯಗೊಂಡ ಹಸುವಿನ ಆರೈಕೆಗೆಂದು ಹಣ ನೀಡಿರುವುದು, ಆದರೆ ಈಗ ಕಾಂಗ್ರೆಸ್ ನವರು ಬಂದು ಹಣ ತಗೋ ದನ ತಗೋ ಎಂದು ಎಂದು ಬೆದರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಪಶು ಆಸ್ಪತ್ರೆ ಗಾಗಿ ಹಸುವಿನ ಮಾಲೀಕ ಕರ್ಣ ಮತ್ತು ನಾಲ್ಕು ಹಸುಗಳು ಹೋರಾಟ ಮಾಡಿದ್ದವು, ಈಗ ಜಿಹಾದಿಗಳು ಕರ್ಣನ ಹಸು ಕತ್ತರಿಸಿದ್ದಾರೆ. ಜೊತೆಗೆ ಮುಂದೆ ನಿನ್ನನ್ನೂ ಕತ್ತರಿಸುತ್ತೇವೆ ಎಂದು ಭಯ ಹುಟ್ಟಿಸಲು ಪ್ರಯತ್ನಿಸಿದ್ದಾರೆ ಎಂದು ಅಶೋಕ್ ಹೇಳಿದರು.
ನನ್ನ 60 ವರ್ಷದ ಜೀವನದಲ್ಲಿ ಯಾವತ್ತೂ ಈ ರೀತಿಯ ಘಟನೆ ನೋಡಿರಲಿಲ್ಲ, ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಅದನ್ನು ಕೂಡ ನೋಡಿದಂತಾಯಿತು. ಇದೊಂದು ತಾಲಿಬಾನ್ ಸರ್ಕಾರ ಈ ಕೃತ್ಯದ ವಿರುದ್ಧ ಹಿಂದೂ ಪರ ಸಂಘಟನೆಗಳು ಹೋರಾಟ ಮಾಡುತ್ತವೆ. ಹಾಗೂ ಹಿಂದೂಗಳ ಮೇಲಿನ ಹಲ್ಲೆಯನ್ನ ಖಂಡಿಸುತ್ತೇವೆ ಎಂದರು.
ಸಿದ್ದರಾಮಯ್ಯ ನವರು ಔಟ್ ಗೋಯಿಂಗ್ ಸಿಎಂ. ಹೀಗಾಗಿ ಅವರು ದನದ ಮಾಲೀಕ ಕರ್ಣನಿಗೆ ಧನ ಸಹಾಯ ಮಾಡಿಲ್ಲ. ಅಂದರು ಕೂಡ ತೊಂದರೆ ಇಲ್ಲ. ದಯವಿಟ್ಟು ನ್ಯಾಯ ಕೊಡಿಸಿ, ಕಾರ್ಯಕ್ರಮದಲ್ಲಿ ತ್ಯಾಗ ಮಾಡಬೇಕು ಎಂದು ಹೇಳುತ್ತೀರಿ, ಆದರೆ ಹೋಗುವ ಮುನ್ನ ಅನ್ಯಾಯ ಮಾಡಿ ಹೋಗಬೇಡಿ ಎಂದು ಅಶೋಕ್ ಮನವಿ ಮಾಡಿದರು.
PublicNext
14/01/2025 05:33 pm