", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/52563-1736927352-02bc60af-43f9-4fe5-abad-ae1c0cc8978f.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SharathRaju" }, "editor": { "@type": "Person", "name": "nirmala.aralikatti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು : ರಾಜ್ಯ ಕಾಂಗ್ರೆಸ್ ನಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಜೋರು ಚರ್ಚೆಯಾಗುತ್ತಿದೆ. ಹಾಲಿ ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆ ಶಿ...Read more" } ", "keywords": "The Delhi election and Siddaramaiah's budget have set the stage for a new leader to take the reins in the state. The Aam Aadmi Party (AAP) has emerged as a strong contender, with Arvind Kejriwal at the helm. The party's focus on issues like education, healthcare, and corruption has resonated with the people, and they are likely to give the AAP a chance to govern the state ¹. The Bharatiya Janata Party (BJP) and the Indian National Congress (INC) are also in the fray, but they face an uphill task in convincing the voters to choose them over the AAP. The election is expected to be a closely contested one, with all three parties putting up a strong fight. As the campaign heats up, it will be interesting to see how the parties fare and who ultimately emerges as the winner,Bangalore,Bangalore-Rural,Politics", "url": "https://publicnext.com/node" } ದೆಹಲಿ ಎಲೆಕ್ಷನ್ ಮತ್ತು ಸಿದ್ದರಾಮಯ್ಯ ಬಜೆಟ್ ನಂತರ ರಾಜ್ಯಕ್ಕೆ ನೂತನ ಕೈ ಸಾರಥಿ : ರೇಸ್ ಗೆ ಸಾಹುಕಾರ್ ಎಂಟ್ರಿ..!
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೆಹಲಿ ಎಲೆಕ್ಷನ್ ಮತ್ತು ಸಿದ್ದರಾಮಯ್ಯ ಬಜೆಟ್ ನಂತರ ರಾಜ್ಯಕ್ಕೆ ನೂತನ ಕೈ ಸಾರಥಿ : ರೇಸ್ ಗೆ ಸಾಹುಕಾರ್ ಎಂಟ್ರಿ..!

ಬೆಂಗಳೂರು : ರಾಜ್ಯ ಕಾಂಗ್ರೆಸ್ ನಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಜೋರು ಚರ್ಚೆಯಾಗುತ್ತಿದೆ. ಹಾಲಿ ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ ಇದ್ದಾರೆ ಆದ್ರೆ ಅವರು ಅವರಿಗೆ ಎರಡು ಹುದ್ದೆಯಲ್ಲಿ ಕೆಲಸ ಮಾಡ್ತಿದ್ದಾರೆ ಕಾಂಗ್ರೆಸ್ ನಲ್ಲಿ ಒನ್ ಮ್ಯಾನ್ ಒನ್ ಪೊಸ್ಟ್ ನಿಯಮವಿದೆ ಅದನ್ನ ಜಾರಿ ಮಾಡಿ ಎಂದು ಕಾಂಗ್ರೆಸ್ ನ ಕೆಲ ನಾಯಕರು ಆಗಾಗ್ಗೆ ಹೇಳ್ತ ಬರ್ತಾನೆ ಇದ್ದಾರೆ ಆದ್ರಲ್ಲೂ ಇತ್ತೀಚೆಗೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ಕೂಗು ಜೋರಾಗಿ ನಡೆಯುತ್ತಿದೆ.

ಒಂದು ವೇಳೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯಾಗುವುದಾದರೆ ಯಾರೆಲ್ಲ ರೇಸ್ ನಲ್ಲಿ ಬರಬಹುದು ಎಂಬ ಚರ್ಚೆಯೂ ಪಕ್ಷದಲ್ಲಿ ನಡೆಯುತ್ತಿದೆ. ಆದ್ರೆ‌ ಇದೀಗ ಆ ಸ್ಥಾನಕ್ಕೆ ಬೆಳಗಾವಿ ಸಾಹುಕಾರ್ ಸಚಿವ ಸತೀಶ್ ಜಾರಕಿಹೊಳಿ ಎಂಟ್ರಿಯಾಗಿದ್ದಾರೆ. ಮೊನ್ನೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಬಳಿಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಜೊತೆ ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಮಾತನಾಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಮೂಲಗಳ ಪ್ರಕಾರ ಸತೀಶ್ ಜಾರಕಿಹೊಳಿ ಸಹ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸುರ್ಜೇವಾಲ ಜೊತೆ ಪ್ರತ್ಯೇಕವಾಗಿ ಸತೀಶ್ ಜಾರಕಿಹೊಳಿ ಮಾತನಾಡಿದ್ದಾರೆ ಎನ್ನಲಾಗಿದೆ. ನನಗೆ 50 ಕ್ಕೂ ಹೆಚ್ಚು ಶಾಸಕರು ಕೆಪಿಸಿಸಿ ಅಧ್ಯಕ್ಷರ ಸ್ಥಾನ ಆಗುವಂತೆ ಹೇಳುತ್ತಿದ್ದಾರೆ ಹೀಗಾಗಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವೇಳೆ ನನ್ನನ್ನು ಪರಿಗಣಿಸಿ ಎಂದು ಸತೀಶ್ ಜಾರಕಿಹೊಳಿ ಸುರ್ಜೇವಾಲಗೆ ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ.

ಆದ್ರೆ ಸದ್ಯಕ್ಕೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಇಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ ಮುಂದಿನ ತಿಂಗಳು ದೆಹಲಿ ವಿಧಾನಸಭಾ ಚುನಾವಣಾ ನಡೆಯಲಿದೆ ಅದಾದ ಬಳಿಕ ಮಾರ್ಚ್ ನಲ್ಲಿ ಸಿದ್ದರಾಮಯ್ಯ ಬಜೆಟ್ ಮಂಡನೆಯಾಗಲಿದೆ ಇದೆಲ್ಲ ಮುಗಿದ ಬಳಿಕ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ನೋಡೋಣ ಎಂದು ಹೈಕಮಾಂಡ್ ಹೇಳಿದಂತೆ. ಅಲ್ಲಿಗೆ ಮಾರ್ಚ್ ಬಳಿಕವೇ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯಾಗುವು ಸಾಧ್ಯತೆ ಇದೆ. ಆದ್ರೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಮತ್ತೆ ಒಕ್ಕಲಿಗ ಅಥವಾ ಲಿಂಗಾಯತ ಸಮುದಾಯದವರು ಕೇಳುತ್ತಿದ್ದ ಸಮಯದಲ್ಲಿ ಸಾಹುಕಾರ್ ಸತೀಶ್ ಜಾರಕಿಹೊಳಿ ಕೇಳುತ್ತಿರೋದು ಸಾಕಷ್ಟು ಕುತೂಹಲ ಮೂಡಿಸಿದೆ.

Edited By : Nirmala Aralikatti
Kshetra Samachara

Kshetra Samachara

15/01/2025 01:19 pm

Cinque Terre

482

Cinque Terre

0