ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: "ರಾಜ್ಯ‌ಸರ್ಕಾರದ ಪಾಪದ ಕೊಡ ತುಂಬಿದೆ"- ಸಿಡಿದ ವಿಜಯೇಂದ್ರ

ಬೆಂಗಳೂರು : ಕಾಂಗ್ರೆಸ್ ರಾಜ್ಯ ಸರ್ಕಾರದ ಪಾಪದ ಕೊಡ ತುಂಬಿದೆ. ಅದಕ್ಕೆ ಹಸುವಿನ ಕೆಚ್ಚಲು ಕೊಯ್ದಿರೋ ದುರ್ಘಟನೆ ನಡೆದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ.

ಬೆಂಗಳೂರಲ್ಲಿ ಹಸುವಿನ ಮಾಲೀಕ ಕರ್ಣ ಅವರನ್ನು ಭೇಟಿಯಾಗಿ ಸಾಂತ್ವನ ಹೇಳಿದ ನಂತರ ಅವರು ಮಾತನಾಡಿದರು. ಗೋವನ್ನು ತಾಯಿಯ ಸಮಾನವಾಗಿ ಕಾಣುತ್ತೇವೆ. ಅಂತಹ ಗೋವಿಗೆ‌ ಯಾವ ಪರಿಸ್ಥಿತಿ ಆಗಿದೆ‌ ಅಂಥ ನೋಡಿದ್ದೇವೆ. ಗೋಪಾಲಕ‌ ಕರ್ಣನ‌ ಕುಟುಂಬಕ್ಕೆ ಧೈರ್ಯ ಹೇಳಿದ್ದೇವೆ.

ಇದೊಂದು ಅಕ್ಷಮ್ಯ ಅಪರಾಧ.

ಸಿದ್ದರಾಮಯ್ಯ ಸಿಎಂ ಆದ ಮೇಲೆ ಗೋ ರಕ್ಷಣೆ ಆಗ್ತಿಲ್ಲ. ಇಂತಹ ಪರಿಸ್ಥಿತಿಗೆ ಈ ಸರ್ಕಾರವೇ‌ ಕಾರಣ. ಈ‌ ಘಟನೆಯಿಂದ ಕಾಂಗ್ರೆಸ್ ಸರ್ಕಾರ & ಸಿದ್ದರಾಮಯ್ಯ ಇಬ್ಬರಿಗೂ ಒಳ್ಳೆಯದು ಆಗಲ್ಲ ಎಂದು ವಿಜಯೇಂದ್ರ ಕಿಡಿಕಾರಿದ್ದಾರೆ.

Edited By : Shivu K
PublicNext

PublicNext

14/01/2025 09:33 pm

Cinque Terre

36.86 K

Cinque Terre

2