ಬೆಂಗಗಳೂರು: ಕನ್ನಡ ಅನುವಾದದಲ್ಲಿ ಎಡವಿದ ಕೆಪಿಎಸ್‌ಸಿ ವಿರುದ್ಧ ಅಭ್ಯರ್ಥಿಗಳು ನಾಳೆ ಪ್ರತಿಭಟನೆಯ ಕಹಳೆ ಮೊಳಗಿಸಿದಾರೆ. ಆಲ್ ಕರ್ನಾಟಕ ಸ್ಟೇಟ್ ಸ್ಟೂಡೆಂಟ್ಸ್ ಅಸೋಸಿಯೇಷನ್ ಕಡೆಯಿಂದ ಪ್ರತಿಭಟನೆಗೆ ಕರೆ ಕೊಟ್ಟಿದ್ದು ಹೋರಾಟದಲ್ಲಿ ಸುಮಾರು 3000 ಆಕಾಂಕ್ಷಿಗಳು, ವಿದ್ಯಾರ್ಥಿಗಳು ಭಾಗಿಯಾಗುವ ನಿರೀಕ್ಷೆ ಇದೆ.
ಕೆಪಿಎಸ್‌ಸಿ ಪರೀಕ್ಷೆ ಕನ್ನಡ ಪತ್ರಿಕೆಯಲ್ಲಿ ದೋಷ ಹಿನ್ನೆಲೆ ಹೋರಾಟ ಮಾಡಲಿದ್ದು ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಕೆಪಿಎಸ್‌ಸಿ ಪದೇ ಪದೇ ಅನ್ಯಾಯ ಮಾಡ್ತಿದೆ ಎಂಬ ಕೂಗು ಕೇಳಿ ಬಂದಿದೆ. ಆಗಸ್ಟ್ 27 ಹಾಗೂ ಡಿಸೆಂಬರ್ 29ರಂದು ನಡೆದಿದ್ದ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳಲ್ಲಿ ದೋಷ ಆರೋಪ ಇದ್ದು ಕರ್ನಾಟಕ ಲೋಕಸೇವಾ ಆಯೋಗವು ಉದ್ದೇಶಪೂರ್ವಕವಾಗಿ ಮಾಡಿದ ಕೃತ್ಯ ಅಂತ ಪ್ರತಿಭಟನೆಗೆ ಕರೆ ಕೊಟ್ಟಿದ್ದಾರೆ.
PublicNext
15/01/2025 11:43 am