ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಸಮಾಜದಲ್ಲಿ ಬೆಂಕಿ ಹಚ್ಚುವ ಕೆಲ ಜನ ಇದ್ದಾರೆ - ಬೇಸರ ವ್ಯಕ್ತಪಡಿಸಿದ ಹೊರಟ್ಟಿ

ಧಾರವಾಡ: ಈ ದೇಶದಲ್ಲಿ ಸಾವಿರಾರು ಜಾತಿಗಳಿವೆ. ಜಾತಿ, ಜಾತಿಗಳ ಮಧ್ಯೆ ಭಿನ್ನಾಭಿಪ್ರಾಯ ತಂದಿಡುವ ಹಾಗೂ ಬೆಂಕಿ ಹಚ್ಚುವ ಜನರಿದ್ದಾರೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಧಾರವಾಡದಲ್ಲಿ ಮಾತನಾಡಿದ ಅವರು, ನಾವೆಲ್ಲ ಸಣ್ಣವರಿದ್ದಾಗ ಅಲ್ಲಾದೇವರನ್ನು ಕಳುಹಿಸಲು ಹೋಗುತ್ತಿದ್ದೆವು. ಅಲ್ಲಿ ಎಲ್ಲಿಯೂ ಜಾತಿ ಇರಲಿಲ್ಲ. ಎಲ್ಲರ ಮನೆಯಲ್ಲೂ ಚೊಂಗ್ಯಾ ಎಂಬ ಖಾದ್ಯ ಮಾಡುತ್ತಿದ್ದೆವು. ಈಗ ಈ ಖಾದ್ಯವನ್ನು ಕೆಲವರು ಮಾತ್ರ ಮಾಡುತ್ತಾರೆ ಎಂದರು.

ಈಗ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣಪತಿ ಇಡಲು ಅವಕಾಶ ಕೊಟ್ಟರು. ಅದಕ್ಕೆ ಅವರಿಗೆ ಎಷ್ಟು ಗೌರವ ಸಿಗುತ್ತಿದೆ ನೋಡಿ. ಆದರೆ, ಸಮಾಜದಲ್ಲಿ ಬೆಂಕಿ ಹಚ್ಚುವ ಕೆಲ ಜನ ಇರುತ್ತಾರೆ. ಗಲಾಟೆ ಮಾಡುವ ಉದ್ದೇಶವನ್ನೇ ಇಟ್ಟುಕೊಂಡಿರುತ್ತಾರೆ. ಎಲ್ಲರೂ ಹೊಂದಿಕೊಂಡು ಹೋಗುವ ಕೆಲಸ ಆಗಬೇಕು. ಎಲ್ಲಿಯವರೆಗೂ ಸಮಾಜಘಾತುಕ ಶಕ್ತಿಗಳು ಇರುತ್ತವೆಯೋ ಅಲ್ಲಿಯವರೆಗೂ ಎಲ್ಲರೂ ಒಂದಾಗುವ ಕೆಲಸ ಆಗುವುದಿಲ್ಲ. ಆದ್ದರಿಂದ ಉತ್ತರ ಪ್ರದೇಶದಲ್ಲಿ ಮಾಡಿದಂತೆ ಇಲ್ಲಿಯೂ ಬಂದೋಬಸ್ತ್ ಮಾಡಬೇಕು. ಸರ್ಕಾರ ತಾನು ಮಾಡುವ ಕರ್ತವ್ಯ ಮಾಡಬೇಕು. ರಾಜಕಾರಣ ಕಲುಷಿತವಾಗಿ ಹೀಗೆಲ್ಲ ಆಗುತ್ತಿದೆ ಎಂದರು.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

17/09/2024 07:59 pm

Cinque Terre

59.85 K

Cinque Terre

4

ಸಂಬಂಧಿತ ಸುದ್ದಿ