ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: 50 ವರ್ಷದ ನನ್ನ ಸಿನಿ ಜೀವನದಲ್ಲಿ ದೌರ್ಜನ್ಯ ಕಂಡಿಲ್ಲ , ಕೇಳಿಲ್ಲ : ಪ್ರಮಿಳ ಜೋಶಾಯಿ

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ posh ಕಮಿಟಿ ಬೇಕಾ? ಬೇಡ್ವಾ ? ಅನೋದರ ಬಗ್ಗೆ ಇಂದು ಫಿಲ್ಮ್ ಚೇಂಬರ್ ನಲ್ಲಿ ಚರ್ಚೆ ನಡೆದಿದ್ದು, ಈ ಬಗ್ಗೆ ಹಿರಿಯ ಕಲಾವಿದೆ ಪ್ರಮಿಳ ಜೋಶಾಯಿ ಅವರು ಪಬ್ಲಿಕ್ ಗೆ ಪ್ರತಿಕ್ರಿಯೆ ನೀಡಿದರೆ.

ಬೆಂಗಳೂರು : ಇಂದು ಬೆಂಗಳೂರಿನ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಮಹಿಳಾ ಕಲಾವಿದಯರ ರಕ್ಷಣೆ ಕುರಿತು ಸಭೆ ನಡೆಸಲಾಗಿತ್ತು. ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌದರಿ ಅವರ ನೇತೃತ್ವದಲ್ಲಿ ಈ ಸಭೆ ನಡೆದಿದ್ದು, ಸಭೆಯಲ್ಲಿ ನೀತು, ಅಶ್ವಿನಿ, ತಾರಾ, ಭಾವನ ಇನ್ನು ಮುಂತಾದ ಕಲಾವಿದೆಯರು ಭಾಗಿಯಾಗಿದ್ದರು.

ಸಭೆ ಬಳಿಕ ಮಾತನಾಡಿದ ಪ್ರಮಿಳ ಜೋಶಾಯಿ ಅವರು, 50 ವರ್ಷಗಳ ನನ್ನ ಸಿನಿ ಜೀವನದಲ್ಲಿ ದೌರ್ಜನ್ಯ ಕಂಡಿಲ್ಲ, ಕೇಳಿಲ್ಲ. ಈಗಲೇ ಯಾಕೆ ಈ ವಿಚಾರ ಹೊರಗೆ ಬರುತ್ತಿದೆ? ಆದರೂ ಮಹಿಳೆಯರು ತಮಗೆ ಆಗಿರುವ ದೌರ್ಜನ್ಯದ ಬಗ್ಗೆ ಮಾತನಾಡಿದರೆ, ಹೊರ ಹಾಕುವುದು ತುಂಬಾ ಒಳ್ಳೆಯ ವಿಷಯ, ಸರ್ಕಾರ ಕಮಿಟಿ ಮಾಡಲು ಹೇಳಿದೆ, ನಾವು ಈ ಬಗ್ಗೆ ಇನ್ನಷ್ಟು ಚರ್ಚೆ ಮಾಡುತ್ತೇವೆ ಎಂದು ಹೇಳಿದರು.

Edited By : Manjunath H D
PublicNext

PublicNext

16/09/2024 10:18 pm

Cinque Terre

41.05 K

Cinque Terre

0

ಸಂಬಂಧಿತ ಸುದ್ದಿ