ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೂಬಳ್ಳಿಯಲ್ಲಿ ಸೌಹಾರ್ದತೆ ಈದ್ ಮಿಲಾದ್ : ಹಿಂದೂ ಮುಸ್ಲಿಂ ಬಾಯಿ ಬಾಯಿ..!

ಹುಬ್ಬಳ್ಳಿ : ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಹಿಂದೂ ಮುಸ್ಲಿಂ ಯಾವುದೇ ಹಬ್ಬ ಇರಲಿ ಅದೊಂದು ಸಂಭ್ರಮ ಮಾತ್ರ ಅದ್ಬುತ ಕ್ಷಣಗಳಿಗೆ ಸಾಕ್ಷಿಯಾಗುವುದಂತೂ ಸತ್ಯ. ಹಿಂದೂಗಳ ಹಬ್ಬದಲ್ಲಿ ಮುಸ್ಲಿಮರು, ಮುಸ್ಲಿಂ ಸಮುದಾಯದ ಹಬ್ಬಗಳಲ್ಲಿ ಹಿಂದೂಗಳು ಭಾಗವಹಿಸುವ ಮೂಲಕ ಹುಬ್ಬಳ್ಳಿಯನ್ನು ಸೌಹಾರ್ದತೆಯೆ ನೆಲೆಯನ್ನಾಗಿ‌ ಮಾಡಿದ್ದಾರೆ. ಹಾಗಿದ್ದರೇ ಬನ್ನಿ ಹುಬ್ಬಳ್ಳಿಯಲ್ಲಿ ಈದ್ ಮಿಲಾದ್ ಹಬ್ಬದ ಆಚರಣೆ ವೈಖರಿ ನೋಡಿಕೊಂಡು ಬರೋಣ..

ಎಲ್ಲೆಡೆಯೂ ಹಬ್ಬದ ಸಂಭ್ರಮ, ಮಹಮ್ಮದ್ ಪೈಗಂಬರರ ಕುರಿತಾದ ಘೋಷಣೆಗಳು. ಮತ್ತೊಂದು ಕಡೆಯಲ್ಲಿ ಹಿಂದೂಗಳ ತಂಪು ಪಾನೀಯ ವಿತರಣೆ ಕಾರ್ಯ. ಇದೆಲ್ಲಾ ದೃಶ್ಯಗಳಿಗೆ ಸಾಕ್ಷಿಯಾಗಿದ್ದು, ವಾಣಿಜ್ಯನಗರಿ ಹುಬ್ಬಳ್ಳಿಯ ಹೃದಯ ಭಾಗ ದುರ್ಗದಬೈಲ್. ಹೌದು.. ಮುಸ್ಲಿಂ ಸಮುದಾಯದ ಪವಿತ್ರ ಹಬ್ಬಗಳಲ್ಲಿ ಒಂದಾಗಿರುವ ಈದ್ ಮಿಲಾದ್ ಹಬ್ಬದ ಪ್ರಯುಕ್ತವಾಗಿ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಅದ್ದೂರಿಯಾಗಿ ಮೆರವಣಿಗೆ ಮಾಡುವ ಮೂಲಕ ಆಚರಣೆ ಮಾಡಲಾಯಿತು. ಮೆರವಣಿಗೆಗೆ ಅಂಜುಮನ್ ಸಂಸ್ಥೆಯ ಹಾಗೂ ಮುಸ್ಲಿಂ ಸಮುದಾಯದ ಮುಖಂಡರು ವಿದ್ಯುಕ್ತವಾಗಿ ಚಾಲನೆ ನೀಡಿದರು.

ಇನ್ನೂ ಹುಬ್ಬಳ್ಳಿಯ ಹೃದಯ ಭಾಗದಲ್ಲಿರು ದುರ್ಗದ ಬೈಲ್ ನಲ್ಲಿ ಮುಸ್ಲಿಂ ಬಾಂಧವರು ಮೆರವಣಿಗೆ ಮೂಲಕ ಹುಬ್ಬಳ್ಳಿಯ ವಿವಿಧ ಬೀದಿಗಳಲ್ಲಿ ಸಂಚರಿಸುವ ಮೂಲಕ ಆಚರಣೆ ಮಾಡಿದರು. ಇದೇ ವೇಳೆ ಹುಬ್ಬಳ್ಳಿಯ ಆಟೋ ಚಾಲಕರ ಹಾಗೂ ಮಾಲೀಕರ ಸಂಘದಿಂದ ತಂಪು ಪಾನೀಯ ವಿತರಣೆ ಮೂಲಕ ಹಬ್ಬದ ಆಚರಣೆಗೆ ಕೈ ಜೋಡಿಸಿರುವುದು ನಿಜಕ್ಕೂ ಸೌಹಾರ್ದತೆಗೆ ಸಾಕ್ಷಿಯಾಗಿದೆ. ಜಾತಿ ಮತ ಬೇಧ ಮರೆತು ಹುಬ್ಬಳ್ಳಿ ಹೂಬಳ್ಳಿಯಂತೆ ಕಂಗೊಳಿಸಲಿ ಎಂಬುವುದು ಪಬ್ಲಿಕ್ ನೆಕ್ಸ್ಟ್ ಆಶಯ..

ಮಲ್ಲೇಶ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

Edited By : Vinayak Patil
Kshetra Samachara

Kshetra Samachara

16/09/2024 09:27 pm

Cinque Terre

30.2 K

Cinque Terre

2

ಸಂಬಂಧಿತ ಸುದ್ದಿ