ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಪಂಚಮಸಾಲಿ ಮೀಸಲಾತಿಗಾಗಿ ವಕೀಲರ ಮೂಲಕ ಹೋರಾಟದ ನಿರ್ಧಾರ : ಜಯ ಮೃತ್ಯುಂಜಯ ಸ್ವಾಮೀಜಿ

ಹುಬ್ಬಳ್ಳಿ : ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗಾಗಿ ಆಗ್ರಹಿಸಿ ವಕೀಲರ ಮೂಲಕವೇ ಸೆಪ್ಟೆಂಬರ್-20ರಂದು ಪರಿಷತ್ತು ಹೋರಾಟ ನಡೆಸಲು ನಿರ್ಧಾರ ಮಾಡಲಾಗಿದೆ ಎಂದು ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2 ಎ ಮೀಸಲಾತಿಗಾಗಿ ಬೆಳಗಾವಿಯಲ್ಲಿ ವಕೀಲರ ಮೂಲಕ ಹೋರಾಟ ಮಾಡಲು ನಿರ್ಧಾರ ಮಾಡಲಾಗಿದೆ. ವಕೀಲರು ಮಹಾ ಪರಿಷತ್ತು ಮಾಡಲು ತೀರ್ಮಾನ ಮಾಡಲಾಗಿದೆ. ಮೀಸಲಾತಿ ವಿಚಾರವಾಗಿ ಬೆಳಗಾವಿಯಲ್ಲಿ ಬೃಹತ್ ಸಭೆ ಮಾಡುತ್ತೆವೆ. 2ಎ ಮೀಸಲಾತಿ ಚಳುವಳಿ ಹರಿಯುವ ಗಂಗೋತ್ರಿ ಇದ್ದಂತೆ. ಆದೇಶ ಸಿಗುವವರೆಗೂ ನಿರಂತರ ಹೋರಾಟ ಮಾಡುತ್ತೆವೆ ಎಂದರು.

ರಾಜ್ಯ ಮಟ್ಟದ ವಕೀಲ ಸಮಾಜ ಸಂಘಟನೆ ಮಾಡುತ್ತಿದ್ದೇವೆ. 7ನೇ ಹಂತದ ಹೋರಾಟ ಈಗಾಗಲೇ ಆರಂಭ ಮಾಡಿದ್ದೇವೆ. ಸರ್ಕಾರ ರಚನೆಯಾದ ಮೇಲೆ 20 ಜನ ಶಾಸಕರು ಅಧಿವೇಶನದಲ್ಲಿ ಮಾತನಾಡಲಿಲ್ಲ. ಶಾಸಕರ ಮನೆ ಮನೆಗೆ ಹೋಗಿ ಆಗ್ರಹ ಪತ್ರ ಚಳುವಳಿ ಮಾಡಿದ್ದೇವೆ. 9 ದಿನಗಳ ಕಾಲ ನಡೆದ ಅಧಿವೇಶನದಲ್ಲಿ ಶಾಸಕರುಗಳು ಸ್ಪೀಕರ್ ಗೆ ಮನವಿ ಕೊಟ್ರು. ಮುಡಾ, ವಾಲ್ಮೀಕಿ ಹಗರಣಗಳ ನಡುವೆ ಶಾಸಕರ ಧ್ವನಿ ಅಡಗಿಸುವ ಕೆಲಸ ಆಗಿದೆ ಎಂದು ಅವರು ಹೇಳಿದರು.

ನಮ್ಮ ಸಮಾಜದ ಹೆಚ್ಚಿನ ಜನ ವಕೀಲರಾಗಿದ್ದಾರೆ. ವಕೀಲರ ಮೂಲಕ ಹೋರಾಟ ಮಾಡುವ ಉದ್ದೇಶ ಹೊಂದಿದ್ದು, ಬೆಳಗಾವಿ, ಕೊಪ್ಪಳ, ಬೀದರ, ಯಾದಗಿರಿ ಸೇರಿ ಹಲವು ಜಿಲ್ಲೆಗಳಲ್ಲಿ ವಕೀಲರನ್ನ ಸೇರಿಸಿ ಸಿಎಂ ಗೆ ಮನವಿ ಕೊಡ್ತೇವೆ. ನಮ್ಮ 2ಎ ಮೀಸಲಾತಿ ಸರ್ಕಾರ ನಿರ್ಲಕ್ಷ ಮಾಡುತ್ತಿದೆ.11 ಜನ ಹಿರಿಯ ವಕೀಲರ ತಂಡ ಮಾಡ್ತಿದ್ದೇವೆ. ಮುಖ್ಯಮಂತ್ರಿ ಮಂತ್ರಿಗೆ ಮನವಿ ಕೊಡಲಿದ್ದೇವೆ. ಕಲ್ಯಾಣ ಕರ್ನಾಟಕ, ಕಿತ್ತೂರ ಕರ್ನಾಟಕ ವಕೀಲರನ್ನ ಸೇರಿಸುತ್ತಿದ್ದೇವೆ ಎಂದು ಅವರು ಹೇಳಿದರು.

ನಾಳೆ ಹೈದ್ರಾಬಾದ್ ಕರ್ನಾಟಕಕಕ್ಕೆ ಮುಖ್ಯಮಂತ್ರಿಗಳು ಬರ್ತಿದ್ದಾರೆ. 2ಎ ಮೀಸಲಾತಿ ಆಗ್ರಹಿಸಿ ಮನವಿ ಕೊಡುತ್ತೇವೆ. ಶಾಸಕಾಂಗ ಮೌನಕ್ಕೆ ಶರಣಾಗಿದೆ, ಹೀಗಾಗಿ ನ್ಯಾಯಾಗ ಮೂಲಕ ಹೋರಾಟ ಮಾಡ್ತೇವೆ. ವಕೀಲರಾದ ಸಿದ್ದರಾಮಯ್ಯ ಅವರಿಗೆ ನಮ್ಮ ವಕೀಲರ ಮೂಲಕ ಆಗ್ರಹ ಮಾಡ್ತೇವೆ. ಮೊದಲ ಬಾರಿಗೆ ಈ ಚಳುವಳಿ ಮಾಡ್ತಿದ್ದೇವೆ. ಇದೇ 22 ರ ರೊಳಗೆ ಮುಖ್ಯಮಂತ್ರಿಗಳು ತಜ್ಞರ ಸಮಿತಿ ಮಾಡಲಿ. ಒಂದು ವೇಳೆ ಮಾಡದೆ ಹೋದ್ರೆ ಬೆಳಗಾವಿಯಲ್ಲಿ ವಕೀಲರ ಪರಿಷತ್ತ ಮುಗಿದ ಮೇಲೆ ಹೋರಾಟ ಮಾಡುತ್ತೇವೆ. ಬೆಳಗಾವಿ ರಾಣಿ ಚನ್ನಮ್ಮ ವೃತ್ತದಲ್ಲಿ ಧರಣಿ ಮಾಡ್ತೇವೆ ಎಂದು ಅವರು ಎಚ್ಚರಿಕೆ ನೀಡಿದರು.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

16/09/2024 08:13 pm

Cinque Terre

44.56 K

Cinque Terre

0

ಸಂಬಂಧಿತ ಸುದ್ದಿ