ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಜೈಲಲ್ಲಿ ಸಿಕ್ಕಿದ್ದು ಲಕ್ಷ ಲಕ್ಷ ಮೌಲ್ಯದ ಮೊಬೈಲ್ ಫೋನ್ - ಕವರ್ ಕಟ್ಟಿ ವಾಟರ್ ಪೈಪ್‌ನಲ್ಲಿಟ್ಟಿದ್ದ ಕೈದಿಗಳು

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನ ಮೇಲೆ ದಾಳಿ‌ ಪ್ರಕರಣ ಸ್ಫೋಟಕ ವಿಚಾರಗಳು ಬಯಲಾಗಿವೆ. ಹುಳಿಮಾವು ಇನ್ಸ್ಪೆಕ್ಟರ್ ಕುಮಾರಸ್ವಾಮಿ, ಮಡಿವಾಳ ಪಿಐ ಮಹಮ್ಮದ್, ಬೇಗೂರು ಕಷ್ಣಮೂರ್ತಿ ಪರಪ್ಪನ ಅಗ್ರಹಾರ ಇನ್ಸ್‌ಪೆಕ್ಟರ್ ಸತೀಶ್ ಮೈಕೋಲೇಔಟ್ ಗಿರೀಶ್ ದಾಳಿ ನಡೆಸಿದ್ರು.

ಶಿಕ್ಷಾ ಕೈದಿಗಳ ಬ್ಯಾರಕ್ ಮತ್ತು ವಿಚಾರಾಧೀನ ಖೈದಿ ಬ್ಯಾರಕ್ ಮೇಲೆ ದಾಳಿ ನಡೆಸಿದ್ರು. ದಾಳಿಯ ಮೇಲೆ ಮೊಬೈಲ್ ಫೋನ್‌ಗಳು, ನಗದು, ಚಾರ್ಜರ್, ಮಣ್ಣಿನ ಎಲೆಕ್ಟ್ರಾನಿಕ್ ಸ್ಟವ್ ಪತ್ತೆಯಾಗಿವೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಿಕ್ಕಿದ್ದ ವಸ್ತುಗಳು ಏನು ಅಂತ ನೋಡೊದಾದ್ರೆ 7 ಮಣ್ಣಿನ ಎಲೆಕ್ಟ್ರಿಕ್ ಸ್ಟೌವ್‌ಗಳು

ಒಟ್ಟು 15 ಮೊಬೈಲ್ ಪೋನ್‌ಗಳು ಐ ಪೋಡ್, ಇಯರ್ ಫೋನ್‌ಗಳು ಪತ್ತೆ. ಅಷ್ಟೇ ಅಲ್ಲದೆ ತರಕಾರೊ ಕಟ್ ಮಾಡೋ ಚಾಕುಗಳು, ಪಾತ್ರೆಗಳು ಸೀಜ್ ಆಗಿವೆ. ಇನ್ನೂ ಸುಮಾರು 1.3ಲಕ್ಷ ಮೌಲ್ಯದ ಸ್ಯಾಮ್ ಸಂಗ್ ಐ ಪಾಡ್ ಸೀಜ್ ಆಗಿದೆ‌. ಇನ್ನೂ ಕೈದಿಗಳು ಮೊಬೈಲ್ ಸಿಗಬಾರದು ಅಂತ ಏಳೆಂಟು ನಂದಿನಿ ಹಾಲಿನ ಕವರ್ ನಲ್ಲಿ ಮೊಬೈಲ್ ಪ್ಯಾಕ್ ಮಾಡಿ ಬಚ್ಚಲು ನೀರು ಹೋಗೋ ಜಾಗದಲ್ಲಿ ಇಟ್ಟಿದ್ರು. ಪೊಲೀಸ್ರು ದಾಳಿ ನಡೆಸಿದಾಗ ಅನುಮಾನ ಬರಬಾರದು ಅಂತ ನೀರನ್ನ ಬಿಡ್ತಿದ್ರು‌. ಇನ್ನೂ ಈ ಬಗ್ಗೆ ಪ್ರತ್ಯೇಕ ಎಫ್ ಐ ಆರ್ ದಾಖಲಾಗಿದೆ.

ಎಫ್ ಐ ಆರ್ ನಲ್ಲಿ ಭದ್ರತಾ ಸಿಬ್ಬಂದಿಗಳ ಶಾಮೀಲು ಆಗಿರುವ ಬಗ್ಗೆ ಉಲ್ಲೇಖವಾಗಿದೆ. ಇನ್ನೂ ಜೈಲಿನಲ್ಲಿ ಅಧಿಕಾರಿಗಳೆ ಇಂಟರ್ ನೆಟ್ ಪಾಸ್ ವರ್ಡ್ ನೀಡ್ತಿದ್ರಂತೆ. ಹೊರಗಿನವರ ಸಂಪರ್ಕ ಸಾಧಿಸಲು ಇನ್ಸ್ಟಾಗ್ರಾಮ್ ಮತ್ತು ಮೆಸೆಂಜರ್ ಮೂಲಕ ಕಾಲ್ ಮಾತಾಡ್ತಾ ಇದ್ರಂತೆ. ಇನ್ನೂ ಮೊಬೈಲ್ ಅನ್ ಲಾಕ್ ಮಾಡಿಸಿ ಯಾರ್ ಯಾರಿಗೆ ಕಾಲ್ ಮಾಡಿದ್ರು ಎಂದು ತನಿಖೆ ನಡೆಸ್ತಿದ್ದಾರೆ.

ಇನ್ನು ದರ್ಶನ್ ನಾಗ, ಸೀನಾ‌,‌ ವಿಲ್ಸನ್ ಗಾರ್ಡನ್ ನಾಗ ಫೋಟೊ ವೈರಲ್ ಆಗಿದ್ದ ಪ್ರಕರಣದಲ್ಲಿ ಫೋಟೊ ತೆಗೆದ ಮೊಬೈಲ್ ಒಡೆದು ಕಮೋಡ್ ಗೆ ಹಾಕಿದ್ದಾರಂತೆ.

Edited By : Nagaraj Tulugeri
PublicNext

PublicNext

16/09/2024 05:32 pm

Cinque Terre

12.71 K

Cinque Terre

1

ಸಂಬಂಧಿತ ಸುದ್ದಿ