ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಶೆಟ್ಟಿಸ್ ದಾಬಾದಲ್ಲಿ ರಾಜಾರೋಷವಾಗಿ ಅಕ್ರಮ ಸಾರಾಯಿ ಮಾರಾಟ- ಅಬಕಾರಿ ಅಧಿಕಾರಿಗಳೇ ಏನ್ ಮಾಡ್ತಿದ್ದಿರಾ?

ಹುಬ್ಬಳ್ಳಿ: ಅಕ್ರಮ ಸಾರಾಯಿ ಮಾರಾಟ ಬಂದ್ ಮಾಡಲು ಸರ್ಕಾರ ಅಬಕಾರಿ ಅಧಿಕಾರಿಗಳಿಗೆ ಅದೆಷ್ಟೋ ಮಾರ್ಗಸೂಚಿ ನೀಡುತ್ತಲಿದೆ. ಆದ್ರೆ, ಅಬಕಾರಿ ಅಧಿಕಾರಿಗಳು ಮಾತ್ರ ನಮಗೂ ಅಕ್ರಮಕ್ಕೂ ಸಂಬಂಧವಿಲ್ಲ ಎಂಬಂತೆ ವರ್ತನೆ ಮಾಡುತ್ತಿದ್ದಾರೆ. ಅದಕ್ಕೆ ತಾಜಾ ಉದಾಹರಣೆ ಇಲ್ಲೊಂದು ದಾಬಾದಲ್ಲಿ ರಾಜಾರೋಷವಾಗಿ ಅಕ್ರಮವಾಗಿ ಸಾರಾಯಿ ಮಾರಾಟ ಮಾಡ್ತಿರೋದು ಪಬ್ಲಿಕ್ ನೆಕ್ಸ್ಟ್ ಗೆ ದೊರೆತಿದೆ.

ಹೌದು,,, ಹಿಗೇ ಬಿಂದಾಸ್ ಆಗಿ ಅಕ್ರಮ ಸಾರಾಯಿ ಮಾರಾಟ ಮಾಡುತ್ತಿರುವ ದೃಶ್ಯಗಳು ಕಂಡು ಬಂದಿದ್ದು, ಹುಬ್ಬಳ್ಳಿ ತಾಲ್ಲೂಕಿನ ತಡಸ್ ಕ್ರಾಸ್ ಬಳಿ ಇರುವ ಶೆಟ್ಟಿಸ್ ದಾಬಾದಲ್ಲಿ. ಈ ಮಾಲೀಕ ಯಾವುದೇ ಭಯ ಇಲ್ಲದೆ, ಯಾವುದೇ ಪರ್ಮಿಷನ್ ಇಲ್ದೆ, ಹೇಗೆಲ್ಲಾ ರಾಜಾರೋಷವಾಗಿ ಸಾರಾಯಿ ಮಾರಾಟ ಮಾಡ್ತಿದ್ದಾನೆ!

ಇಷ್ಟೊಂದು ಬಿಂದಾಸಾಗಿ ಮಾರಾಟ ಮಾಡುತ್ತಿರುವುದನ್ನು ನೋಡಿದ್ರೇ, ಅಬಕಾರಿ ಅಧಿಕಾರಿಗಳ ಕೈ ಬಿಸಿಯಾಗಿದೆ ಎಂಬಂತೆ ಅರ್ಥವಾಗುತ್ತದೆ. ಏನೇ ಅಕ್ರಮ‌ ನಡೆದ್ರೆ ಪೊಲೀಸ್ ಇಲಾಖೆನೇ ಎಂಬ ಆಲೋಚನೆ ಮಾಡೋರು ಸ್ವಲ್ಪ ಅಬಕಾರಿ ಅಧಿಕಾರಿಗಳ ಕಡೆ‌ನೂ ನೋಡಬೇಕಾಗುತ್ತೆ. ಈ ಇಲಾಖೆ ಮಾತ್ರ ಯಾರ ಕಣ್ಣಿಗೆ ಕಾಣೊಲ್ಲ. ಯಾಕಂದ್ರೇ ಇವರು ಯಾವಗ ಬರ್ತಾರೋ ಯಾವಾಗ ಹೋಗ್ತಾರೊ ಎಲ್ಲಿ ದಾಳಿ ಮಾಡಿರುವ ಉದಾಹರಣೆಗಳೇ ಇಲ್ಲ.

ಇನ್ನೂ ಶೆಟ್ಟಿಸ್ ದಾಬಾದಲ್ಲಿ ಬಾಕ್ಸ್ ಬಾಕ್ಸ್ ಇಟ್ಟು ಸಾರಾಯಿ ಮಾರುತ್ತಿದ್ದಾರೆ. ಕಡಿಮೆ ದರದಲ್ಲಿ ಸಿಗುವ ಚಾಯ್ಸ್, ಓಟಿ ಸೇರಿದಂತೆ ಇತರ ಸಾರಾಯಿ ಮಾರುತ್ತಿದ್ದಾರೆ. ಇಷ್ಟೆಲ್ಲಾ ಗೊತ್ತಿದ್ರೂ ಹುಬ್ಬಳ್ಳಿ ತಾಲ್ಲೂಕಿನ ಗ್ರಾಮೀಣ ಅಬಕಾರಿ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದು ನೋಡಿದ್ರೇ ಏನೋ ಸಮ್‌ತಿಂಗ್‌ ಸಮ್‌ತಿಂಗ್ ಇದೇ ಎಂಬ ಅನುಮಾನ ಮೂಡಿದೆ. ಇನ್ಮುಂದೆಯಾದ್ರು ಅಬಕಾರಿ ಅಧಿಕಾರಿಗಳು ದಾಬಾದತ್ತ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳುತ್ತಾರಾ? ಎಂಬುದನ್ನು ಕಾದು ನೋಡೋಣ.

-ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

Edited By : Suman K
Kshetra Samachara

Kshetra Samachara

16/09/2024 05:14 pm

Cinque Terre

37.86 K

Cinque Terre

5

ಸಂಬಂಧಿತ ಸುದ್ದಿ