ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ಲೈ ಓವರ್ ಬ್ರೀಡ್ಜ್ ಕಾಮಗಾರಿಗೆ ASI ಬಲಿ : 11 ಜನರನ್ನು ಜೈಲಿಗೆ ಅಟ್ಟಿದ ಕಮಿಷನರ್

ಹುಬ್ಬಳ್ಳಿ : ಪ್ಲೈ ಓವರ್ ಬ್ರೀಡ್ಜ್ ಕಾಮಗಾರಿ ವೇಳೆಯಲ್ಲಿ ಅವಘಡ ಸಂಭವಿಸಿ ಪೊಲೀಸ್ ಅಧಿಕಾರಿಯ ಸಾವಿಗೆ ಕಾರಣರಾದ ಜಾಂಡು ಕಂಪನಿಯ 19 ನೌಕರರ ಪೈಕಿ 11 ಜನರನ್ನು ಹುಬ್ಬಳ್ಳಿಯ ಉಪನಗರ ಪೊಲೀಸರು ಬಂಧನ ಮಾಡಿ ಜೈಲಿಗೆ ಅಟ್ಟಿದ್ದಾರೆ.

ಕಳೆದ ಮಂಗಳವಾರ ಸಾಯಂಕಾಲ ಕರ್ತವ್ಯಕ್ಕೆ ತೆರಳುತ್ತಿದ್ದ ಉಪನಗರ ಠಾಣೆಯ ASI ನಾಭಿರಾಜ್ ಅವರ ತಲೆಯ ಮೇಲೆ ಹಳೇ ಕೋರ್ಟ್ ಬಳಿ ನಡೆಯುತ್ತಿದ್ದ ಪ್ಲೈ ಓವರ್ ಬ್ರೀಡ್ಜ್ ಕಾಮಗಾರಿಯ ಕಬ್ಬಿಣದ ರಾಡ್ ನಾಭಿರಾಜ್ ತಲೆಯ ಮೇಲೆ ಬಿದ್ದ ಪರುಣಾಮ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಿದರು ಕೂಡಾ ರವಿವಾರ ಬೆಳಗಿನ ಜಾವ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದರು.

ಈ ಹಿನ್ನೆಲೆ ಉಪನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ FIR ತಿದ್ದುಪಡಿ ಮಾಡಿದ್ದು ಬೇರೆ ಸೆಕ್ಷನ್ ಗಳನ್ನು ಹಾಕಿ 19 ಜನರ ಮೇಲೆ ಪ್ರಕರಣ ದಾಖಲು ಮಾಡಿದ್ದಾರೆ,ಸದ್ಯ 11 ಜನ ಆರೋಪಿಗಳನ್ನು ಬಂಧನ ಮಾಡಿದ್ದು ಇನ್ನುಳಿದ 8 ಜನರ ಬಂಧನಕ್ಕೆ ಜಾಲವನ್ನು ಬಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಹರ್ಷಾ,ಜಿತೇಂದ್ರಪಾಲ್, ಭೂಪೇಂದ್ರ, ಮೊಹ್ಮದ್,ಅಸ್ಲಂ, ಮೊಹ್ಮದ್,ಸಬೀಬ್, ರಿಜಾವುಲ್,ಶಮೀಮ್, ಮೊಹ್ಮದ್,ಎಂಬುವರನ್ನು ಜೈಲಿಗೆ ಅಟ್ಟಿದ್ದಾರೆ.

ಸದ್ಯ ಪ್ಲೈ ಓವರ್ ಬ್ರೀಡ್ಜ್ ಕಾಮಗಾರಿ ನಡೆಸುತ್ತಿದ್ದ ಎಲ್ಲ ಕಾರ್ಮಿಕರು ಕಾಮಗಾರಿಯನ್ನು ನಿಲ್ಲಿಸಿದ್ದಾರೆ,ಅಷ್ಟೇ ಅಲ್ಲದೆ ಮುಂಬರುವ ದಿನಮಾನಗಳಲ್ಲಿ ನಗರದಲ್ಲಿ ನಡೆಯುತ್ತಿರೋ ಅಭಿವೃದ್ಧಿ ಕಾಮಗಾರಿಗಳು ಸುರಕ್ಷತಾ ಕ್ರಮವನ್ನು ವಹಿಸಿ ನಡೆಸುವ ನಿಟ್ಟಿನಲ್ಲಿ ಕಾಂಟ್ರ್ಯಾಕ್ಟರ್'ಗಳಿಗೆ ಈ ಒಂದು ಪ್ರಕರಣ ಎಚ್ಚರಿಕೆ ಗಂಟೆಯಾಗಿದೆ.

ವಿನಯ ರೆಡ್ಡಿ ಕ್ರೈಂ ಬ್ಯುರೋ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.

Edited By : Suman K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

16/09/2024 04:14 pm

Cinque Terre

85.33 K

Cinque Terre

7

ಸಂಬಂಧಿತ ಸುದ್ದಿ