ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಕ್ಕೆ ಮೋಸ : 75.75 ಲಕ್ಷ ವಂಚನೆಯ ದೂರು ದಾಖಲು

ಹುಬ್ಬಳ್ಳಿ : ಬಹುಕೋಟಿ ವಂಚನೆಯ ಕೆಐಎಡಿಬಿ ಪ್ರಕರಣ ಮತ್ತೇ ಮುನ್ನಲೆಗೆ ಬಂದಿದ್ದು, ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಕ್ಕೆ ಮೋಸ ಮಾಡಿರುವ ಹಿನ್ನೆಲೆಯಲ್ಲಿ ಸಿಇಎನ್ ಠಾಣೆಯಲ್ಲಿ ಮತ್ತೊಂದು ದೂರು ದಾಖಲಾಗಿದೆ.

ಹೌದು ಧಾರವಾಡದ ಕೆಐಎಡಿಬಿ ಮತ್ತು ಐಡಿಬಿಐ ಬ್ಯಾಂಕಿನ ಅಧಿಕಾರಿಗಳು, ಇತರರು ಶಾಮೀಲಾಗಿ ನಕಲಿ ದಾಖಲೆ ಸೃಷ್ಟಿಸಿ, ಕೈಗಾರಿಕೋದ್ಯಮಿಯೊಬ್ಬರ ಆಸ್ತಿ ಭೂಸ್ವಾಧೀನಕ್ಕೊಳಪಡಿಸಿ ಪರಿಹಾರ ಧನ ದುರ್ಬಳಕೆ ಮಾಡಿಕೊಂಡಿದ್ದಾರೆ. ಅಲ್ಲದೆ, 75.75 ಲಕ್ಷ ರೂ.ಗಳನ್ನು ಸರ್ಕಾರಿ ಬೊಕ್ಕಸಕ್ಕೆ ನಷ್ಟ ಮಾಡಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಇವೆಲ್ಲರೂ ಶಾಮೀಲಾಗಿ ನನ್ನ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ, ಧಾರವಾಡದ ಐಡಿಬಿಐ ಬ್ಯಾಂಕಿನಲ್ಲಿ ನಕಲಿ ಬ್ಯಾಂಕ್ ಖಾತೆ ತೆರೆದು ಎಸ್ಎಲ್‌ಎಒ, ಕೆಐಎಡಿಬಿ ಧಾರವಾಡ ಅವರಿಗೆ ನನ್ನ ಬೇಲೂರು ಗ್ರಾಮದ ಬ್ಲಾಕ್ ನಂ. 328ರ ಒಟ್ಟು ಕ್ಷೇತ್ರ 2 ಎಕರೆ 23 ಗುಂಟೆ ಆಸ್ತಿಯನ್ನು ಭೂಸ್ವಾಧೀನಕ್ಕೊಳಪಡಿಸಿಕೊಂಡಿದ್ದಾರೆ.

ಪರಿಹಾರದ ಹಣವನ್ನು ಐಡಿಬಿಐ ಬ್ಯಾಂಕಿನಲ್ಲಿ ತೆರೆದ ನಕಲಿ ಖಾತೆಗೆ ಜಮಾ ಮಾಡಿಸಿಕೊಂಡು ನಂತರ ಹಣ ವಿತ್ ಡ್ರಾ ಮಾಡಿಕೊಂಡಿದ್ದಾರೆ. ಒಟ್ಟು 75.75 ಲಕ್ಷ ರೂ. ಸರ್ಕಾದ ಬೊಕ್ಕಸಕ್ಕೆ ನಷ್ಟ ಮಾಡಿದ್ದಾರೆ ಎಂದು ಉದ್ಯಮಿ ಗಣಪತಿ ಭಟ್ ಎಂಬುವವರು ಸಿಇಎನ್‌ ಕೈಂ ಠಾಣೆಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.

Edited By : Vinayak Patil
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

16/09/2024 02:49 pm

Cinque Terre

46.25 K

Cinque Terre

2

ಸಂಬಂಧಿತ ಸುದ್ದಿ