ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಗಣಪತಿ ವಿಸರ್ಜನೆ ವೇಳೆ ಪಟಾಕಿ ವಿಚಾರಕ್ಕೆ ಮಾರಾಮಾರಿ - ಇಬ್ಬರು ಕಿಮ್ಸ್ ಆಸ್ಪತ್ರೆಗೆ ದಾಖಲು

ಹುಬ್ಬಳ್ಳಿ: ಗಣಪತಿ ವಿಸರ್ಜನೆ ವೇಳೆಯಲ್ಲಿ ಪಟಾಕಿ ಹಚ್ಚುವ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಕಲ್ಲು ಹಾಗೂ ಕಟ್ಟಿಗೆಗಳಿಂದ ಮಾರಾಮಾರಿ ಸಂಭವಿಸಿದ ಪರಿಣಾಮ ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡು ಕಿಮ್ಸ್ ಆಸ್ಪತ್ರೆಗೆ ದಾಖಲಾದ ಘಟನೆ ರವಿವಾರ ರಾತ್ರಿ ಕಲಘಟಗಿ ತಾಲ್ಲೂಕಿನಲ್ಲಿ ನಡೆದಿದೆ.

ಕಲಘಟಗಿ ತಾಲ್ಲೂಕಿನ ತಾವರಗೇರಿ ಗ್ರಾಮದಲ್ಲಿ ಗಣಪತಿ ವಿಸರ್ಜನೆ ವೇಳೆ ಪಟಾಕಿ ಹಚ್ಚುವ ವಿಚಾರಕ್ಕೆ ಜಗಳ ನಡೆದಿದ್ದು, ಬಸು ಹಾಗೂ ಸಂಜು ಎಂಬುವರ ಮೇಲೆ ಅದೇ ಗ್ರಾಮದ ಶೇಕಪ್ಪ ಹೊನ್ನಿಹಳ್ಳಿ. ಕಲ್ಮೇಶ, ಮಂಜಪ್ಪ, ನಾಗಪ್ಪ, ಪರಶು, ಹಾಗೂ ಇನ್ನಿತರರು ಸೇರಿ ಕಲ್ಲು ಹಾಗೂ ಕಟ್ಟಿಗೆಯಿಂದ ಹಲ್ಲೆ ನಡೆಸಿದ್ದಾರೆ.

ಇದರ ಪರಿಣಾಮ ಬಸು ಹಾಗೂ ಸಂಜು ತಲೆಗೆ ಗಂಭೀರವಾಗಿ ಗಾಯವಾಗಿದೆ. ಕೂಡಲೇ ಸ್ಥಳೀಯರ ಸಹಾಯದಿಂದ ಇಬ್ಬರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು ಘಟನೆಯ ಕುರಿತು ಹಲ್ಲೆಗೊಳಗಾದ ಬಸು ಹೇಳಿದ್ದು ಹೀಗೆ.

ಗಣೇಶ ವಿಸರ್ಜನೆ ವೇಳೆ ಗ್ರಾಮದಲ್ಲಿ ನಡೆದ ಈ ಅವಘಡದಿಂದ ಗ್ರಾಮಸ್ಥರು ಕೂಡ ಭಯಬೀತಾರಾಗಿದ್ದರೆ. ಹಲ್ಲೆಕೊರರು ವಸ್ತ್ರದಲ್ಲಿ ಕಲ್ಲು ಹಾಗೂ ಕಟ್ಟಿಗೆಯಿಂದ ತಲೆಗೆ ಹೊಡೆದ ಪರಿಣಾಮ ಬಸು ಹಾಗೂ ಸಂಜು ಎಂಬಾತನ ತಲೆ ಒಡೆದಿದ್ದು ಕಿಮ್ಸ್ ನಲ್ಲಿ ಚಿಕಿತ್ಸೆ ಮುಂದುವರೆದಿದೆ. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ವಿನಯ ರೆಡ್ಡಿ ಕ್ರೈಂ ಬ್ಯುರೋ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

16/09/2024 09:29 am

Cinque Terre

126.85 K

Cinque Terre

8

ಸಂಬಂಧಿತ ಸುದ್ದಿ