ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಅಸ್ಥಿ ಪಂಜರ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್!

ಧಾರವಾಡ: ಕಳೆದ ಎರಡು ತಿಂಗಳ ಹಿಂದೆ ಧಾರವಾಡ ವಿದ್ಯಾಗಿರಿ ಠಾಣೆ ಪೊಲೀಸರಿಗೆ ಓರ್ವ ವ್ಯಕ್ತಿ ಕಾಣೆಯಾದ ಬಗ್ಗೆ ದೂರು ಬಂದಿತ್ತು. ತಮಗೆ ಬಂದ ದೂರಿನ ಹಿನ್ನೆಲೆ ಆ ವ್ಯಕ್ತಿ ವಾಸವಿದ್ದ ಧಾರವಾಡದ ಮಾಳಮಡ್ಡಿಯಲ್ಲಿನ ಮನೆಯ ಬಾಗಿಲು ಮುರಿದು ನೋಡಿದ್ದ ಪೊಲೀಸರಿಗೆ ಮನೆ ಮಾಲೀಕ ಮಲಗಿದ ಜಾಗದಲ್ಲೇ ಸತ್ತು ಅಸ್ಥಿ ಪಂಜರವಾಗಿ ಪತ್ತೆಯಾಗಿದ್ದು ಕಂಡು ಬಂದಿತ್ತು.

ಆ ವ್ಯಕ್ತಿಯನ್ನು ಚಂದ್ರಶೇಖರ ಕೊಲ್ಲಾಪುರ ಎಂದು ಗುರುತಿಸಲಾಗಿತ್ತು.‌ ಸಾವನ್ನಪ್ಪಿದ ಚಂದ್ರಶೇಖರ್ ಪತ್ನಿಯ ಸಂಬಂಧಿ ಯಶವಂತ ಪಾಟೀಲ ಎಂಬಾತನೇ ತನ್ನ ಚಿಕ್ಕಪ್ಪ ಕಾಣೆಯಾದ ಬಗ್ಗೆ ದೂರು ದಾಖಲಿಸಿದ್ದ. ಕೋವಿಡ್ ಅವಧಿಯಲ್ಲಿಯೇ ಚಂದ್ರಶೇಖರ್ ಮೃತಪಟ್ಟಿರಬಹುದು ಎಂದು ಆತ ಹೇಳಿಕೊಂಡಿದ್ದ.

ಇನ್ನು ತನ್ನ ಚಿಕ್ಕಪ್ಪನಿಗೆ ತಾನು ಬಿಟ್ಟರೆ ಬೇರೆ ಯಾರೂ ಸಂಬಂಧಿಗಳೇ ಇಲ್ಲ ಎಂದು ಹೇಳಿಕೊಂಡಿದ್ದ. ಇದಾದ ನಂತರ ಇಡೀ ಕೇಸ್‌ಗೆ ಟ್ವಿಸ್ಟ್ ಸಿಕ್ಕಿತ್ತು. ಮೃತ ಚಂದ್ರಶೇಖರನ ತಾಯಿ ಹಾಗೂ ಸಹೋದರರು ಎಂದು ಹೇಳಿಕೊಂಡು ಬಂದಿದ್ದ ಕೆಲವರು ವಿದ್ಯಾಗಿರಿ ಠಾಣೆಯಲ್ಲಿ ತನ್ನ ಪುತ್ರ ಅನಾರೋಗ್ಯದಿಂದ ಸಾವನ್ನಪ್ಪಿಲ್ಲ, ಇದು ಕೊಲೆ ಎಂದು ಶಂಕೆ ವ್ಯಕ್ತಪಡಿಸಿದ್ದರು. ಈಗ‌ ಇದಕ್ಕೂ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಠಾಣೆಗೆ ಬಂದಿದ್ದ ಮಲ್ಲವ್ವ ಕೂಡ ಚಂದ್ರಶೇಖರ್ ತಾಯಿ ಅಲ್ಲವಂತೆ. ಅವಳು ಮಲತಾಯಿ ಎಂದು ಚಂದ್ರಶೇಖರನ ಸಂಬಂಧಿ ಯಶವಂತ ಹೇಳಿದ್ದಾರೆ. ಇಷ್ಟಕ್ಕೂ ಅವರು ಏನು ಹೇಳಿದ್ದಾರೆ ಕೇಳೋಣ ಬನ್ನಿ....

ಬೈಟ್ 1: ಯಶವಂತ, ಚಂದ್ರಶೇಖರನ ಸಂಬಂಧಿ

ಚಂದ್ರಶೇಖರ್ ಸಾವನ್ನಪ್ಪಿದ ಮಾಳಮಡ್ಡಿ‌ ಮನೆಯು ಕೋಟಿ ಕೋಟಿ ಬೆಲೆ ಬಾಳುತ್ತೆ‌. ಇದು ಚಂದ್ರಶೇಖರ್ ಪತ್ನಿಯ ಆಸ್ತಿ. ಚಂದ್ರಶೇಖರ್ ಪತ್ನಿ 2015ರಲ್ಲೇ ಸಾವನ್ನಪ್ಪಿದ ಮೇಲೆ ಈ ಆಸ್ತಿ ಚಂದ್ರಶೇಖರನ ಹೆಸರಿಗೆ ಆಗಿತ್ತು. ಚಂದ್ರಶೇಖರನೂ ಈಗ ಸಾವನ್ನಪ್ಪಿದ್ದು, ಬಹಳಷ್ಟು ಜನ ಈ ಆಸ್ತಿ ಹೊಡೆಯಲು ಪ್ರಯತ್ನ ಕೂಡ ಮಾಡುತ್ತಿದ್ದು, ನನಗೆ ಪ್ರಾಣ ಭಯ ಇದೆ ಎಂದು ಯಶವಂತ ಕೂಡ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ತಾನು ಚಂದ್ರಶೇಖರನ ತಾಯಿ ಎಂದು ಹೇಳಿಕೊಂಡು ಬಂದಿರುವ ವೃದ್ಧೆ ಒಂದೆಡೆಯಾದರೆ, ಆಕೆ ಚಂದ್ರಶೇಖರನಿಗೆ ಮಲತಾಯಿ ಎಂದು ಯಶವಂತ ಮತ್ತೊಂದೆಡೆ ಹೇಳುತ್ತಿದ್ದಾರೆ. ಚಂದ್ರಶೇಖರನದು ಸಹಜ ಸಾವಲ್ಲ ಕೊಲೆ ಎಂದು ಕೆಲವರ ಮೇಲೆ ಸಂಶಯ ವ್ಯಕ್ತಪಡಿಸಿ ಈಗಾಗಲೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಎಲ್ಲಾ ಆಯಾಮಗಳಲ್ಲೂ ಈ ಪ್ರಕರಣದ ತನಿಖೆ ನಡೆದು ಸತ್ಯಾಂಶ ಹೊರಬರಬೇಕಿದೆ.

Edited By : Suman K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

18/09/2024 12:02 pm

Cinque Terre

76.59 K

Cinque Terre

1