ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಪಂಜುರ್ಲಿ ಡಾಬಾದಾಗ ಎಗ್ಗಿಲ್ಲದೇ ಸಾಗುತ್ತಿದೆ ಎಣ್ಣೆ ವ್ಯವಹಾರ....!

ಹ..... ಬರ್ರೀ....ಬರ್ರೀ.....ಎಣ್ಣಿ ಪಾರ್ಟಿ ಮಾಡುನ್ ಅಡ್ರೆಸ್ ನೋಟ್‌ಡೌನ್ ಮಾಡಕೊಳ್ಳ್ರೀ..... ಬನ್ನಿ ಎಣ್ಣಿ ಹೊಡಿಯುನ್...

ಹೌದ್...ಹೌದ್... ಹುಬ್ಬಳ್ಳಿ ಬೆಂಗಳೂರು ಹೈವೇ ಬಾಜುಕ್ ಛಬ್ಬಿ ಹತ್ರ್ ಇರುವ್ ಪಂಜುರ್ಲಿ ಡಾಬಾ ಅಲಿಯಾಸ್... ಪಕ್ಕಾ.‌. ಬಾರ್... ನ್ಯಾಗ್ ಎಣ್ಣಿ ಸಿಗತೈತಿ.... ಗಣೇಶ ಹಬ್ಬಕ್ ಎಲ್ಲಾ ಕಡೆ ಎಣ್ಣಿ ಬಂದ ಮಾಡಿಸಿದ್ರ್ ಇವರು ರಾಜಾರೋಷವಾಗಿ ಮಾರಾಕುಂತಾರ್...

ಪಬ್ಲಿಕ್ ನೆಕ್ಸ್ಟ್ ಕ್ಯಾಮರಾ ಕಣ್ಣಿಗೆ ಕಾಣುತ್ತಿದ್ದಂತಲೇ... ಇದ್ ಬದ್ ಎಣ್ಣಿ ಎಲ್ಲಾ...ಮುಚ್ಚಿಟಿದ್ರೂ...‌ಅದನ್ ಹೋರತಗದಾಗ್ ಗೊತ್ತಾತ್ ಇಲ್ಲಿ ಪೂಲ್ ಸ್ಟಾಕ್ ಮೆಂಟೇನ್ ಮಾಡ್ಯಾರ್ ಅಂತ್....

ಇದ್ ಎಣ್ಣಿ ಜಾತ್ರಿ.... ಎಣ್ಣಿ ತೆರ್ ಎಳ್ಯಾಕ್ ಕುಂತವರ್,,, ಕಿಶನ್ ಶೆಟ್ಟಿ ಅಂತ .... ಎಸ್....ಎಸ್‌‌..‌. ಇದೇ ಪಂಜುರ್ಲಿ ಮಾಲಿಕ್ ಅಂತ .... ಈ ಶೆಟ್ಟಿ ಆ್ಯಂಡ್ ಗ್ಯಾಂಗ್... ಇಂತಹ ಟೈಟ್ ಪರಿಸ್ಥಿತಿಯಲ್ಲಿ ಎಲ್ಲರಿಗೂ ಎಣ್ಣಿಯನ್ನು ದಯಪಾಲಿಸುತ್ತಿರುವ ಪಂಜುರ್ಲಿ ಡಾಬಾ.....

ಅದರಾಗ್ ವಿಡಿಯೋ ಮಾಡಾಕ್ ಹೋದ್ ಮಾಧ್ಯಮದವರ ಮ್ಯಾಗ್... ದಬ್ಬಾಳಿಕೆ ಮಾಡಾಕ್ ಬಂದ್.. ಯಾಕ್ ವಿಡಿಯೋ ಯಾಕ್ ಮಾಡತ್ತಿರೀ ಅಂತ್ ದಮ್ ಹಾಕತ್ತಾರ್....

ಅಲ್ಲ .. ಅಬಕಾರಿ ಇಲಾಖೆಯವರ ಮತ್ ಪೊಲೀಸರ್ ಎಲ್ಲಾ ರೊಕ್ಕಾ ತಿಂದ್ ಭರ್ಜರಿ ಎಣ್ಣಿ ಮಾರಾಕ್ ಬಿಟ್ಟಿರೇನ್‌‌‌‌....... ಏನ್ ದುನಿಯಾ.. ನೋ.... ಏನೋ...

ಎಲ್ಲಾ ರೂಲ್ಸ್ ಬರೇ... ಲೆಟರ್ ನ್ಯಾಗ್.... ಅಷ್ಟ್.... ಏನ್ ಅನ್ನುದ್ ಪಬ್ಲಿಕ್ ಪ್ರಶ್ನೆ....

ಇಷ್ಟಲಿಂಗ ಪಾವಟೆ ಸ್ಪೆಷಲ್ ಬ್ಯುರೊ ಪಬ್ಲಿಕ್ ನೆಕ್ಸ್ಟ್

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

18/09/2024 10:47 am

Cinque Terre

89.47 K

Cinque Terre

4