ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಕಳೆಗುಂದುತ್ತಿದೆ ಅಂತರಾಷ್ಟ್ರೀಯ ಸರ್ಫಿಂಗ್ ಖ್ಯಾತಿಯ ಸಸಿಹಿತ್ಲು ಮುಂಡಾ ಬೀಚ್

ಮುಲ್ಕಿ: ಅಭಿವೃದ್ಧಿ ಕಾರ್ಯಗಳು ನಡೆಯದೆ ಹಳೆಯಂಗಡಿ ಸಮೀಪದ ಅಂತರಾಷ್ಟ್ರೀಯ ಸರ್ಫಿಂಗ್ ಖ್ಯಾತಿಯ ಸಸಿಹಿತ್ಲು ಮುಂಡಾ ಬೀಚ್ ಕಳೆಗುಂದುತ್ತಿದ್ದು ಪ್ರವಾಸಿಗರ ಸಂಖ್ಯೆ ಕಡಿಮೆಯಾಗುತ್ತಿದೆ.

ಕಳೆದ ಕೆಲವು ವರ್ಷಗಳ ಹಿಂದೆ ಶಾಸಕ ಅಭಯ ಚಂದ್ರ ಜೈನ್ ನೇತೃತ್ವದಲ್ಲಿ ಅಂತರಾಷ್ಟ್ರೀಯ ಸರ್ಫಿಂಗ್ ಕ್ರೀಡೆ ನಡೆಸಿ ಪ್ರಸಿದ್ಧಿಯಾಗಿದ್ದ ಸಸಿಹಿತ್ಲು ಮುಂಡಾ ಬೀಚ್ ಅಭಿವೃದ್ಧಿ ಕಾಣದೆ ಸಮುದ್ರ ಪಾಲಾಗಿದೆ.

ಮುಂಡಾ ಬೀಚ್‌ಗೆ ಎಂಟ್ರಿ ಆಗುತ್ತಲೇ ಎದುರು ಭಾಗದ ನಾಮಫಲಕ ಕಿತ್ತು ಹೋಗಿದ್ದು ದುರಸ್ತಿ ಕಾಣದೆ ಕಂಗೆಟ್ಟಿದೆ. ಎದುರು ಭಾಗದ ಗೇಟಿನ ಬಳಿ ಸಮುದ್ರದ ತಟದಲ್ಲಿ ಸಿಕ್ಕಿದ ತ್ಯಾಜ್ಯದ ರಾಶಿ ವಿಲೇವಾರಿ ಮಾಡದೆ ಗೋಣಿಯಲ್ಲಿ ಇಟ್ಟಿದ್ದಾರೆ. ಬೀಚ್ ಗೇಟಿನ ಒಳಭಾಗಕ್ಕೆ ಹೋಗುತ್ತಲೇ ಸುತ್ತಲು ಹುಲ್ಲು ಕಾಡು ಬೆಳೆದಿದ್ದು ಕಟಾವು ಮಾಡಲು ಸಂಬಂಧಪಟ್ಟ ಇಲಾಖೆ ಮುಂದಾಗಿಲ್ಲ. ಬೀಚ್ ಎದುರು ಭಾಗದಲ್ಲಿ ಗಡಿ ಭಾಗದ ಉಡುಪಿ ಜಿಲ್ಲೆಯ ಹೆಜಮಾಡಿ ಬಂದರು ಕಾಮಗಾರಿ ಬಿರುಸಿನಿಂದ ನಡೆಯುತ್ತಿದ್ದು.

ಇತ್ತ ಬೀಚ್ ಪ್ರದೇಶ ಯಾವುದೇ ನಾಮಫಲಕ , ತಡೆಗೋಡೆ ಕಾಮಗಾರಿ ಮತ್ತಿತರ ಮೂಲಭೂತ ಸೌಕರ್ಯಗಳ ಕೊರತೆಯಿಂದ ಪ್ರವಾಸಿಗರ ಸಂಖ್ಯೆ ಇಳಿಮುಖವಾಗುತ್ತಿದೆ. ದಯವಿಟ್ಟು ಸಂಸದರು ಹಾಗೂ ಶಾಸಕರು ಹಾಗೂ ಪ್ರವಾಸೋದ್ಯಮ ಇಲಾಖೆ ಈ ಬಗ್ಗೆ ಗಮನ ಹರಿಸಿ ಅಂತರಾಷ್ಟ್ರೀಯ ಸರ್ಫಿಂಗ್ ಖ್ಯಾತಿಯ ಮುಂಡಾ ಬೀಚ್ ಅಭಿವೃದ್ಧಿಪಡಿಸಬೇಕು ಎಂದು ಸ್ಥಳೀಯ ನಾಗರಿಕರು ಒತ್ತಾಯಿಸಿದ್ದಾರೆ.

Edited By : Vinayak Patil
Kshetra Samachara

Kshetra Samachara

15/09/2024 10:09 pm

Cinque Terre

21.28 K

Cinque Terre

0

ಸಂಬಂಧಿತ ಸುದ್ದಿ